Site icon PowerTV

ಹೆಚ್.ಡಿ ರೇವಣ್ಣ ನಿಜವಾದ ಶನಿ : ಬಾಲಕೃಷ್ಣ

ಮಂಡ್ಯ : ಹೆಚ್.ಡಿ ರೇವಣ್ಣ ನಿಜವಾದ ಶನಿ ಅಂತ ಮಾಜಿ ಶಾಸಕ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಜೆಡಿಎಸ್ ಬಿಟ್ಟಾಗ ನಮ್ಮನ್ನು ಶನಿ ಎಂದಿದ್ರು. ಶನಿಗಳು ಪಕ್ಷ ಬಿಟ್ಟು ಹೋಗಿವೆ ಅಂತ ಮಾತನಾಡಿದ್ರು. ಈಗ ಎಲ್ಲರೂ ರೇವಣ್ಣ ಬಗ್ಗೆ ಮಾತನಾಡ್ತಿದ್ದಾರೆ. ಹಾಗಾದರೆ ನಿಜವಾದ ಶನಿ ಯಾರು? ಅಂತ ಪ್ರಶ್ನಿಸಿದ್ದಾರೆ.
ಜೆಡಿಎಸ್ ಪಕ್ಷದ ಈ ದುಸ್ಥಿತಿಗೆ ರೇವಣ್ಣನೇ ಕಾರಣ. ವಾಜಪೇಯಿ 26 ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಿಭಾಯಿಸಿದ್ರು. ಆದರೆ ಇವರ ಕೈಲಿ ಒಂದು ಪಕ್ಷದ ಶಾಸಕರನ್ನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಅಂತ ಕಿಡಿ ಕಾರಿದ್ದಾರೆ.

Exit mobile version