Site icon PowerTV

‘ರಾಜೀ’ನಾಮೆ ಸರ್ಕಸ್​ ಬಗ್ಗೆ ರಾಹುಲ್​​ ಗಾಂಧಿ ಮೊದಲ ಪ್ರತಿಕ್ರಿಯೆ..!

ಬೆಂಗಳೂರು : ರಾಜ್ಯ ರಾಜಕಾರಣ ಇಡೀ ದೇಶದ ಗಮನ ಸೆಳೆದಿದೆ. ಅತೃಪ್ತರ ರಾಜೀನಾಮೆ ಪ್ರಹಸನದ್ದೇ ಸದ್ದು..! ರಾಜ್ಯ ರಾಜಕಾರಣದ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ದೋಸ್ತಿ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟದ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಬಳಿ ಹಣದ ಪವರ್ ಇದೆ. ಸರ್ಕಾರ ಉರುಳಿಸಲು ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಬಿಜೆಪಿ ಹಣದ ಬಲದ ಮೂಲಕ ಸರ್ಕಾರ ಉರುಳಿಸಲು ಪ್ಲ್ಯಾನ್ ಮಾಡಿ ಎಂದು ಆರೋಪಿಸಿದ್ದಾರೆ.

Exit mobile version