ಇಂದಿನಿಂದ ಅತೃಪ್ತ ಶಾಸಕರ ವಿಚಾರಣೆ ನಡೆಯಿಲಿದೆ. ಇವತ್ತು ಮೂವರು ಶಾಸಕರು ವಿಚಾರಣೆಗೆ ಹಾಜರಾಗಲು ಸ್ಪೀಕರ್ ರಮೇಶ್ ಕುಮಾರ್ ಸಮಯ ನಿಗದಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರಾದ ಆನಂದಸಿಂಗ್, ಪ್ರತಾಪಗೌಡ ಪಾಟೀಲ್ , ಹಾಗೇ ಜೆಡಿಎಸ್ ಶಾಸಕ ನಾರಾಯಣ ಗೌಡ
ಅವರ ವಿಚಾರಣೆ ನಡೆಯಲಿದೆ. ರಾಜೀನಾಮೆ ಕ್ರಮಬದ್ಧವಾಗಿದ್ರೂ ಶಾಸಕರ ವಿಚಾರಣೆ ಮಾಡುವುದಾಗಿ ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ. ಕಾನೂನು ಬದ್ಧವಾಗಿ ಪ್ರಕ್ರಿಯೆ ನಡೆಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಆದ್ರೆ ರಾಜೀನಾಮೆ ನೀಡಿರುವ ಶಾಸಕರು ವಿಚಾರಣೆಗೆ ಹಾಜರಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.