Site icon PowerTV

ಇಂದೇ ಅತೃಪ್ತರು ಸ್ಪೀಕರ್ ಮುಂದೆ ಹಾಜರಾಗ್ಬೇಕು : ಸುಪ್ರೀಂ

ನವದೆಹಲಿ : ಕಾಂಗ್ರೆಸ್​ ಹಾಗೂ ಜೆಡಿಎಸ್​ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರವನ್ನು ಸ್ಪೀಕರ್​ ಇಂದೇ ನಿರ್ಧರಿಸ್ಬೇಕು. ಅತೃಪ್ತರು ಇಂದು ಸಂಜೆ 6ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಬೇಕು ಅಂತ ಸುಪ್ರೀಂಕೋರ್ಟ್ ಸೂಚಿಸಿದೆ.
ರಾಜೀನಾಮೆಗಳನ್ನು ಅಂಗೀಕರಿಸದೆ ಸ್ಪೀಕರ್ ಮುಂದೂಡ್ತಿದ್ದಾರೆ ಅಂತ ಆರೋಪಿಸಿ 10 ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಅತೃಪ್ತರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ರು. ವಾದ ಆಲಿಸಿದ ಸುಪ್ರೀಂ, ಸ್ಪೀಕರ್ ಇಂದು ನಿರ್ಧಾರ ತೆಗೆದುಕೊಂಡು ನಾಳೆ ಕೋರ್ಟ್​​​ಗೆ ವಿಷಯ ತಿಳಿಸಬೇಕು. ಅತೃಪ್ತರು ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಬೇಕು ಅಂತ ಆದೇಶಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

Exit mobile version