ಬೆಂಗಳೂರು : ಶಾಸಕರ ಸರಣಿ ರಾಜೀನಾಮೆಯಿಂದ ‘ಮೈತ್ರಿ’ ಕಂಗೆಟ್ಟಿದೆ. ಕೇವಲ ಹದಿಮೂರೇ ತಿಂಗಳಿಗೆ ಮೈತ್ರಿ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.
ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಬಹುಮತವಿಲ್ಲ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಲಿ ಅಂತ ಬಿಜೆಪಿ ಒತ್ತಾಯಿಸ್ತಿದೆ. ಆದರೆ, ಮೈತ್ರಿ ನಾಯಕರು ಮಾತ್ರ ಸರ್ಕಾರ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡ್ತಿದ್ದಾರೆ.
ಇನ್ನು ಸಚಿವ ಕೃಷ್ಣ ಬೈರೇಗೌಡ್ರು ಮಾತನಾಡಿ, ‘ಧೈರ್ಯವಿದ್ರೆ ಅವಿಶ್ವಾಸ ನಿರ್ಣಯ ಮಂಡಿಸಲಿ’ ಅಂತ ಬಿಜೆಪಿಗೆ ಸವಾಲೆಸೆದಿದ್ದಾರೆ. ”ನಾಳೆಯಿಂದ ವಿಧಾನಮಂಡಳ ಅಧಿವೇಶನ ಆರಂಭವಾಗಲಿದೆ. ಬಿಜೆಪಿಯವರು ಬೇಕಾದ್ರೆ ಅವಿಶ್ವಾಸ ನಿರ್ಣಯ ಮಂಡಿಸಲಿ. ಹಣಕಾಸಿನ ವಿಧೇಯಕವನ್ನ ಮತಕ್ಕೆ ಹಾಕುತ್ತೇವೆ. ನಮಗೆ ಬಹುಮತ ಇದೆಯೋ ಇಲ್ಲವೋ ಗೊತ್ತಾಗುತ್ತೆ” ಅಂತ ಹೇಳಿದ್ದಾರೆ.