Site icon PowerTV

ಸಹೋದರ ರಮೇಶ್​​​​ ಉಚ್ಚಾಟನೆಗೆ ಸತೀಶ್​ ಜಾರಕಿಹೊಳಿ ಆಗ್ರಹ..!

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿಯವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಚಿವ ಸ್ಥಾನದಿಂದ ವಂಚಿತನಾದ ಬಳಿಕ ದೋಸ್ತಿ ಸರಕಾರದೊಂದಿಗೆ ಮುನಿಸಿಕೊಂಡಿದ್ರು. ಲೋಕಸಭೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎನ್ನುವ ಆರೋಪವೂ ಅವ್ರ ಮೇಲೆ ಕೇಳಿ ಬಂದಿತ್ತು. ಮಾತ್ರವಲ್ಲದೇ, ಬಹಳ ದಿನಗಳ ಹಿಂದೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಂದು ಅವ್ರು ಹೇಳಿದ್ರು. ಕಾಂಗ್ರೆಸ್ ಪಕ್ಷದ ಯಾವ ನಾಯಕರ ಮಾತಿಗೂ ಬೆಲೆ ಕೊಡುತ್ತಿರಲಿಲ್ಲ. ಇದಾದ ಬಳಿಕ‌ ಎರಡು ದಿನಗಳ ಹಿಂದೆಯಷ್ಟೇ ರಮೇಶ್ ರಾಜೀನಾಮೆ ನೀಡಿದ್ರು.

ಸಹೋದರನ ನಡೆಯಿಂದ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಇರಿಸುಮುರುಸು ಉಂಟುಮಾಡುತ್ತಿದ್ದವು. ರಮೇಶ್​ ಅವರ ಇತ್ತೀಚಿನ ವರ್ತನೆಯಿಂದ ಪಕ್ಷದಲ್ಲಿ ಸತೀಶ್ ಮುಜುಗರಕ್ಕೊಳಗಾಗಿದ್ರು.

ಇದರಿಂದ ಪಕ್ಷಕ್ಕೆ ಮತ್ತು ತಮ್ಮ‌ ರಾಜಕೀಯ ಬೆಳವಣಿಗೆಗೂ‌ ಡ್ಯಾಮೇಜ್ ಆಗುತ್ತಿದೆಯೆಂದು ರಮೇಶ್ ವಿರುದ್ಧ ವರಿಷ್ಠರು ಕಠಿಣ ಕ್ರಮ ಕೈಗೊಂಡು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸತೀಶ್ ಮನವಿ ಮಾಡಿದ್ದಾರೆಯೆನ್ನಾಗಿದೆ.

 

 

Exit mobile version