Site icon PowerTV

ತಾಕತ್ತಿದ್ದರೆ ಬಿಜೆಪಿ ಶಾಸಕರನ್ನು ಮುಟ್ಟಲಿ : ರೇಣುಕಾಚಾರ್ಯ

ದಾವಣಗೆರೆ : ತಾಕತ್ತಿದ್ದರೆ ಬಿಜೆಪಿ ಶಾಸಕರನ್ನು ಮುಟ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. 

ದಾವಣಗೆರೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಬಿಜೆಪಿ ಶಾಸಕರನ್ನ ರಿವರ್ಸ್ ಆಪರೇಶನ್ ಮಾಡುತ್ತೆ ಎಂದಿದ್ದ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ್ರು.  ತಾಕತ್ತಿದ್ದರೆ ಒಬ್ಬ ಬಿಜೆಪಿ ಶಾಸಕನ ಮುಟ್ಟಲಿ. ದೋಸ್ತಿ ಸರ್ಕಾರದ ವೈಫಲ್ಯದಿಂದಾಗಿ ಶಾಸಕರು ರಾಜೀನಾಮೆ ನೀಡ್ತಿದ್ದಾರೆ. ರಾಜೀನಾಮೆಗೂ ಬಿಜೆಪಿಗೂ ಯಾವ್ದೇ ಸಂಬಂಧವಿಲ್ಲ. ಅಷ್ಟೇ ಅಲ್ಲ ದೇವೇಗೌಡರ ಕುಟುಂಬಕ್ಕೂ ಬುದ್ಧಿ ಭ್ರಮಣೆಯಾಗಿದೆ ಎಂದರು. 

Exit mobile version