Site icon PowerTV

‘ಮೈತ್ರಿ’ಯ ಮತ್ತೊಂದು ವಿಕೆಟ್ ಪತನ : ರಮೇಶ್​ ಜಾರಕಿಹೊಳಿ ರಾಜೀನಾಮೆ..!

ಬೆಂಗಳೂರು : ಬೆಳಗ್ಗೆಯಷ್ಟೇ ವಿಜಯನಗರ ಶಾಸಕ ಆನಂದ್​ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿಗೆ ಶಾಕ್ ನೀಡಿದ್ದರು. ಇದೀಗ ದೋಸ್ತಿಯ ಎರಡನೇ ವಿಕೆಟ್ ಪತನವಾಗಿದೆ. ಗೋಕಾಕ್​ ಸಾಹುಕಾರ ರಮೇಶ್​ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ 6 ತಿಂಗಳಿಂದ ಬಂಡಾಯವೆದ್ದಿದ್ದ ರಮೇಶ್ ಜಾರಕಿಹೊಳಿ ಕೊನೆಗೂ ಮೈತ್ರಿಗೆ ಶಾಕ್ ಕೊಟ್ಟಿದ್ದಾರೆ. ರಹಸ್ಯ ಸ್ಥಳದಲ್ಲಿ ಅವರು ಠಿಕಾಣಿ ಹೂಡಿರುವ ಅವರು ಬೆಳಗ್ಗೆಯಿಂದ ಅವರ ಮೊಬೈಲ್ ಸ್ವಿಚ್​ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಆನಂದ್​ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಮಾಸ್​ ರಿಸೈನ್ ಮಂತ್ರ ಜಪಿಸಿದ್ದರು. ಅದೇರೀತಿ ಕಾರ್ಯಚರಣೆ ನಡೆಸಿದ್ದಾರಾ ಅನ್ನೋ ಆತಂಕ ಮೈತ್ರಿಯಲ್ಲಿ ಮನೆ ಮಾಡಿದೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್,ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮೇಲೆ ಎಲ್ಲರ ಕಣ್ಣಿದೆ.

Exit mobile version