Site icon PowerTV

ಸಿದ್ದರಾಮಯ್ಯ 5 ವರ್ಷ ನಿದ್ದೆ ಮಾಡಿದ್ರು : ಈಶ್ವರಪ್ಪ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ 5 ವರ್ಷ ನಿದ್ದೆ ಮಾಡಿದ್ರು. ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಅಂತ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ”ಮಾಜಿ ಸಿಎಂ ಸಿದ್ದರಾಮಯ್ಯ 5 ವರ್ಷ ನಿದ್ದೆ ಮಾಡಿದ್ರು. ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನ ಜನ ಮನೆಗೆ ಕಳುಹಿಸಿದ್ದಾರೆ. ಕೆಲಸಗಾರ ಮೋದಿಯವರನ್ನ ಜನರು ಗೆಲ್ಲಿಸಿದ್ದಾರೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ ಕೊಟ್ಟಿದ್ದೀವಿ ಅಂತಾರೆ. ಯಾವುದನ್ನೂ ಅವರು ತನ್ನ ಜೇಬಿನಿಂದ ಕೊಟ್ಟಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

Exit mobile version