Site icon PowerTV

ವಿದ್ಯಾರ್ಥಿಗೆ  ಶೂನಲ್ಲಿ ಹೊಡೆಸಿದ ಶಿಕ್ಷಕ?

ಬೆಂಗಳೂರು : ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಆತನ ಸಹಪಾಠಿಯಿಂದ ಶೂನಲ್ಲಿ ಹೊಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರದ ಬೂರಗಮಾಕಲಹಳ್ಳಿಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ಬಗ್ಗೆ ಕೇಳಿದ್ರೆ ಎಂಥವರ ರಕ್ತ ಕೂಡ ಕುದಿಯುತ್ತದೆ. ನೀವು ಕೂಡ ಸಿಡಿದೇಳ್ತೀರಾ?

ಗುರುವಾರ ಶಿಕ್ಷಕ ವಿದ್ಯಾರ್ಥಿಗೆ ಸಹಪಾಠಿಯಿಂದ  ಶೂನಲ್ಲಿ ಹೊಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಶಿಕ್ಷಕರು ಶೂನಲ್ಲಿ ತನಗೆ ಹೊಡೆಸಿರುವ ವಿಷಯವನ್ನು  ಮಗು ಮನೆಗೆ ಹೋಗಿ ತಮ್ಮ ಪೋಷಕರಿಗೆ ತಿಳಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಇಂದು ಎಲ್ಲಾ ಮಕ್ಕಳ ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಶಾಲೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಎರಡು ಗಂಟೆಯಿಂದ ಪ್ರತಿಭಟನೆ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್  ಉಟಾಂಗಿದೆ. ಇನ್ನೂ ಶಾಲಾ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿ ಹಾಕುತ್ತಿದೆ. ಪೊಲೀಸರಿಗೂ ಶಾಲೆಯೊಳಗೆ ಪ್ರವೇಶ ನೀಡುತ್ತಿಲ್ಲ.

Exit mobile version