Site icon PowerTV

‘ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಡೋಂಗಿ’ : ಚಲುವರಾಯಸ್ವಾಮಿ

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಡೋಂಗಿ ಅಂತ ವ್ಯಂಗ್ಯವಾಡಿದ್ದಾರೆ. ”ಸಹಾಯ ಮಾಡಿದ್ದ ಬಗ್ಗೆ ಹೇಳುವುದು ದೊಡ್ಡಸ್ತಿಕೆ ಅಲ್ಲ. ಸಿಎಂ ಆದ್ಮೇಲೆ ಸಹಾಯ ಮಾಡೋದ್ರಲ್ಲಿ ದೊಡ್ಡಸ್ತಿಕೆ ಇಲ್ಲ. ಸಿಕ್ಕಸಿಕ್ಕಲ್ಲಿ ಫೋಟೋ ತೆಗೆಸಿಕೊಂಡ್ರೆ ಸಾಧನೆ ಅಲ್ಲ. ಗ್ರಾಮ ವಾಸ್ತವ್ಯದಿಂದ ಏನೂ ಪ್ರಯೋಜನವಾಗೋಲ್ಲ. ಒಬ್ಬರನ್ನು ಮಾತನಾಡಿಸಿ, ಇನ್ನೊಬ್ಬರನ್ನು ಬಿಡೋದು ಸರಿಯಲ್ಲ. ಸಿಎಂ ಆದವರು 6 ಕೋಟಿ ಜನರ ಪ್ರತಿನಿಧಿಯಾಗಿರಬೇಕು” ಅಂತ ಗುಡುಗಿದ್ದಾರೆ.

Exit mobile version