ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಕನಿಷ್ಠ 42 -52 ಸಚಿವರು ಇಂದೇ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಮೋದಿ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗುತ್ತೆ ಅನ್ನೋ ಕುತೂಹಲವಿದೆ. ಅದರಲ್ಲೂ ಮುಖ್ಯವಾಗಿ 25 ಸಂಸದರನ್ನು ನೀಡಿ ಮೋದಿ ಸರ್ಕಾರಕ್ಕೆ ಬಲ ತುಂಬಿರುವ ಕರ್ನಾಟಕದ ಮೇಲೂ ನಿರೀಕ್ಷೆ ದುಪ್ಪಟ್ಟಿತ್ತು. ಇದೀಗ ಮೊದಲ ಹಂತದಲ್ಲಿ ರಾಜ್ಯದ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಡಿ.ವಿ ಸದಾನಂದಗೌಡರಿಗೆ ಈ ಬಾರಿಯೂ ಮೋದಿ ಕ್ಯಾಬಿನೆಟ್ನಲ್ಲಿ ಅವಕಾಶ ನೀಡಲಾಗುತ್ತಿದೆ. ಡಿ.ವಿ ಸದಾನಂದಗೌಡರು ಬೆಂಗಳೂರು ಉತ್ತರದಿಂದ ಮತ್ತೆ ಸಂಸತ್ತಿಗೆ ಆಯ್ಕೆಯಾಗಿರುವವರು. ಇನ್ನು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೂ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ನೀಡಲಾಗುತ್ತಿದೆ. ಯಾರಿಗೆ ಯಾವ ಖಾತೆ ಸಿಗುತ್ತದೆ ಅನ್ನೋದನ್ನು ಕಾದುನೋಡಬೇಕು.