Site icon PowerTV

‘ಮೈತ್ರಿ’ ಪತನಕ್ಕೆ ಶುರುವಾಯ್ತಾ ಕೌಂಟ್​ಡೌನ್​?

ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನಕ್ಕೆ ಕೌಂಟ್​ಡೌನ್​ ಶುರುವಾಯ್ತಾ? ಬಿಜೆಪಿ ನಾಯಕರ ಜೊತೆ ರೆಬೆಲ್​ ಶಾಸಕ ರಮೇಶ್ ಜಾರಕಿ ಹೊಳಿ ಸಭೆ ನಡೆಸಿದ್ದು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಮೇಶ್​ ಜಾರಕಿಹೊಳಿ ಆಪ್ತ ಶಾಸಕರು ಮತ್ತು ಬಿಜೆಪಿ ನಾಯಕರ ಜೊತೆಗ ಸಭೆ ನಡೆಸಿದ್ದಾರೆ. ಬಿಜೆಪಿ ನೂತನ ಸಂಸದ ಉಮೇಶ್ ಜಾಧವ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ​​ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್​ ಅವರ ಜೊತೆ ಅತೃಪ್ತರು ಸಭೆ ನಡೆಸಿದ್ದಾರೆ. ಮಹೇಶ್​ ಕಮಟಹಳ್ಳಿ ಹಾಗೂ ನಾಗೇಂದ್ರ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇದೇ ವೇಳೆಯಲ್ಲಿ ಕಲಬುರಗಿಯ ನೂತನ ಸಂಸದರಾಗಿರೋ ಉಮೇಶ್ ಜಾಧವ್ ಅವರಿಗೆ ರಮೇಶ್ ಜಾರಕಿಹೊಳಿ ಸನ್ಮಾನ ಮಾಡಿದ್ದಾರೆ. ಉಮೇಶ್ ಜಾಧವ್ ಅವರ ಗೆಲುವಿನಿಂದ ಉಳಿದ ಅತೃಪ್ತರಿಗೆ ಧೈರ್ಯ ಹೆಚ್ಚಾಗಿದೆ. ಒಟ್ಟಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 5 ರಿಂದ 6 ಮಂದಿ ಶಾಸಕರು ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ಹೇಳಿದ್ದು, ಮೈತ್ರಿಗೆ ಪತನದ ಕೌಂಟ್​ಡೌನ್​ ಆತಂಕ ಶುರುವಾಗಿದೆ.

Exit mobile version