Site icon PowerTV

‘ಒಂದು ಕ್ಷೇತ್ರಕ್ಕಾಗಿ ಮುಖಂಡರನ್ನು ದ್ವೇಷಿಸೋದು ಸರಿಯಲ್ಲ’..!

ನವದೆಹಲಿ: ಒಂದು ಕ್ಷೇತ್ರಕ್ಕಾಗಿ ಮುಖಂಡರನ್ನು ದ್ವೇಷಿಸೋದು ಸರಿ ಅಲ್ಲ ಅಂತ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಶಿವಾಜಿನಗರ ಶಾಸಕ ರೊಷನ್ ಬೇಗ್ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಯು. ಟಿ. ಖಾದರ್, ಒಂದು ಕ್ಷೇತ್ರಕ್ಕಾಗಿ ಮುಖಂಡರನ್ನು ದ್ವೇಷಿಸೋದು ಸರಿಯಲ್ಲ. ಸೀಟು ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ದಿನೇಶ್ ಗುಂಡೂರಾವ್ ಉತ್ತಮ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಎಲ್ಲ ಜಾತಿಯ ಮುಖಂಡರಾಗಿದ್ದಾರೆ. ರೋಷನ್ ಬೇಗ್ ಹಿರಿಯರು, ಹೀಗೆ ಮಾತನಾಡಬಾರದು” ಎಂದಿದ್ದಾರೆ. ಅಗತ್ಯ ಬಿದ್ದಲ್ಲಿ ಬಿಜೆಪಿ ಜೊತೆ ಕೈ ಜೋಡಿಸೋಕೆ ಸಿದ್ಧರಿದ್ದೇವೆ ಅಂತ ಶಿವಾಜಿನಗರ ಶಾಸಕ ರೋಷನ್ ಬೇಗ್ ಹೇಳಿಕೆ ನೀಡಿದ್ದಾರೆ.

Exit mobile version