Site icon PowerTV

ಎನ್‌ಡಿಎ ಮೈತ್ರಿಕೂಟದ ಸದಸ್ಯರಿಗೆ ಭರ್ಜರಿ ಪಾರ್ಟಿ..!

ನವದೆಹಲಿ: ಲೋಕಸಭಾ ಚುನಾವಣೋತ್ತರ ಸಮೀಕ್ಷೆಯಿಂದ ಬಿಜೆಪಿ ಫುಲ್​ ಖುಷ್ ಆಗಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವುದಾಗಿ ವರದಿ ಪ್ರಕಟಿಸಿದ್ದು, ಬಿಜೆಪಿಗೆ ಬಹುಮತ ಫಿಕ್ಸ್‌ ಎಂಬ ವರದಿಯಿಂದ ನಾಯಕರು ಫುಲ್ ಜೋಶ್​ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರಿಗೆ ಭರ್ಜರಿ ಔತಣಕೂಟ ಇಂದು ದೆಹಲಿಯಲ್ಲಿ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್​ಪಿ ಮೈತ್ರಿಯಿಂದ ಕೊಂಚ ಹಿನ್ನಡೆಯಾಗಿದ್ದು, ಯುಪಿ ಸ್ಥಾನಗಳನ್ನ ಪಶ್ಚಿಮ ಬಂಗಾಳ ತುಂಬಿಕೊಡುವ ಸಾಧ್ಯತೆಯೂ ಇದೆ ಅಂತ ತಿಳಿದುಬಂದಿದೆ. ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ  ಬಿಜೆಪಿಗೆ ಗೆಲುವಿನ ಸಿಹಿ ಸುಳಿವು ಸಿಕ್ಕಿದೆ. ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳಲು ಇನ್ನೆರೆಡೇ ದಿನ ಬಾಕಿ ಇದ್ದು, ಇಂದು ಎನ್‌ಡಿಎ ಮೈತ್ರಿಕೂಟದ ಸದಸ್ಯರಿಗೆ ಅಮಿತ್ ಶಾ ಔತಣಕೂಟ ಏರ್ಪಡಿಸಿದ್ದಾರೆ.

Exit mobile version