Site icon PowerTV

ಹಣದ ಜೊತೆ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ‘ಕೈ’ ಕಾರ್ಯಕರ್ತ

ಕಲಬುರ್ಗಿ: ರಾಜ್ಯದಲ್ಲಿ ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಚಿಂಚೋಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಂಚಲು ತಂದಿದ್ದ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಚಾಣ ಸದ್ದುಮಾಡಿದ್ದು, ಮತದಾರರಿಗೆ ಹಂಚಲು ತಂದಿದ್ದ ಹಣದ ಸಮೇತ ತಾಲೂಕು ಪಂಚಾಯತು ಸದಸ್ಯ ನಾಮದೇವ ರಾಠೋಡ್ ಸಿಕ್ಕಿಬಿದ್ದಿದ್ದಾರೆ.

ಬಿರು ಬಿಸಿಲಿನ ನಡುವೆಯೇ ಉಮೇಶ್ ಜಾಧವ್ ಪ್ರತಿಭಟನೆ ನಡೆಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಧರಣಿ ನಡೆಸಿದ್ದಾರೆ. “ಹಣ ಹಂಚಲು ಬಂದಿದ್ದವರು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದ ಹಣದ ಆಮಿಷ ಒಡ್ಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಅಂತ ಉಮೇಶ್ ಜಾಧವ್​ ಆಗ್ರಹಿಸಿದ್ದಾರೆ.

Exit mobile version