Site icon PowerTV

ಸಚಿವ ಸ್ಥಾನ ಸಿಗೋ ಭರವಸೆ ಇದೆ: ಬಿ. ಸಿ. ಪಾಟೀಲ್

ಹುಬ್ಬಳ್ಳಿ: ಒಂದೆಡೆ ಸರ್ಕಾರ ಡೋಲಾಯಮಾನವಾಗಿದ್ರೆ ಮತ್ತೊಂದೆಡೆ ಸಿಎಂ, ಸಚಿವಗಿರಿ ಕನಸು ಕಾಣ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ನನ್ನನ್ನು ಸಚಿವರನ್ನಾಗಿಸುವ ಭರವಸೆ ನೀಡಿದ್ದಾರೆ ಅಂತ ಶಾಸಕ ಬಿ. ಸಿ. ಪಾಟೀಲ್ ಭರವಸೆಯ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಲೋಕಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗೆ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಅತೃಪ್ತಿ ಹೊಂದಿದ್ದೆ. ಆದರೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ” ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

ವೀರಶೈವರು ಕಾಂಗ್ರೆಸ್ ಮತ ಹಾಕಲ್ಲ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯಿಸಿ, “ಸುಮ್ಮನೆ ಹೇಳಿ ಹೇಳಿ ಕಾಂಗ್ರೆಸ್​ನಿಂದ ವೀರಶೈವರನ್ನು ದೂರು ಮಾಡುವ ಷಡ್ಯಂತ್ರ. ಕಾಂಗ್ರೆಸ್ ಪಕ್ಷದಲ್ಲಿ 16 ವೀರಶೈವ, ಲಿಂಗಾಯತ ಶಾಸಕರು ಆಯ್ಕೆಯಾಗಿದ್ದೇವೆ. ನಾವು ಅಪ್ಪಟ ಬಸವಣ್ಣನ ಅನುಯಾಯಿಗಳು” ಎಂದಿದ್ದಾರೆ.

Exit mobile version