Site icon PowerTV

ಶೋಭಾಗೆ ಸಚಿವೆ ಉಮಾಶ್ರೀ ತಿರುಗೇಟು..!

ಹುಬ್ಬಳ್ಳಿ: ಬಳೆ ಹಾಕಿಕೊಳ್ಳಲಿ ಎಂಬ ಸಂಸದೆ ಶೋಭಾ ಹೇಳಿಕೆಗೆ ಸಚಿವೆ ಉಮಾಶ್ರೀ ತಿರುಗೇಟು ನೀಡಿದ್ದಾರೆ. “ಟಗರಿನ ವಿಷಯಕ್ಕೆ ಬಂದರೆ ಗುದ್ದಲಿದೆ” ಎಂದು ಶೋಭಾ ಕರಂದ್ಲಾಜೆ ಅವರಿಗೆ ಎಚ್ಚರಿಸಿದ್ದಾರೆ.

ಕುಂದಗೋಳದ ಹೀರೆಗುಂಜಳದಲ್ಲಿ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದ ಉಮಾಶ್ರೀ, “ನಮ್ಮ ಟಗರಿನ‌ ವಿಷಯಕ್ಕೆ ಬರಬೇಡ. ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ. ಸಿದ್ದರಾಮಯ್ಯ ಕೈಗೆ ಬಂಗಾರದ ಬಳೆ ತೊಡಿಸಬೇಕು. ಕಬ್ಬಿಣದ ಬಳೆ ಹಾಕೊಂಡು ಜೈಲಿಗೆ ಹೋಗೊ ವ್ಯಕ್ತಿ ಅಲ್ಲ” ಅಂತ ಹೇಳಿದ್ರು.

ಸಿದ್ದರಾಮಯ್ಯ ಅವರು ಸಾಧ್ಯವಾದ್ರೆ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ಇಲ್ಲಾಂದ್ರೆ ಬಳೆ ತೊಡ್ಕೊಳ್ಳಲಿ ಅಂತ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.

Exit mobile version