Site icon PowerTV

ರೇವಣ್ಣಗೆ ಸಿಎಂ ಆಗೋ ಅರ್ಹತೆ ಇದೆ ಅಂದ್ರು ಸಿದ್ದರಾಮಯ್ಯ..!

ಬೆಂಗಳೂರು: ಜೆಡಿಎಸ್​ ಮುಖಂಡ ಹೆಚ್​.ಡಿ. ರೇವಣ್ಣಗೆ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ ಅಂತ ಟ್ವೀಟ್ ಮಾಡೋ ಮೂಲಕ ಮಾಜಿ ಸಿಎಂ ಸಿದ್ದರಾಮ್ಯ ದೋಸ್ತಿ ಪಕ್ಷಗಳಲ್ಲಿ ಸಂಚಲನ ಮೂಡಿಸಿದ್ದಾರೆ.

ಈಗಾಗಲೇ ಸಿಎಂ ಪಟ್ಟದ ಮೇಲೆ ಹಲವು ರಾಜಕೀಯ ನಾಯಕರು ಬಹಿರಂಗವಾಗಿ ಒಲವು ವ್ಯಕ್ತಪಡಿಸಿಕೊಂಡಿದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಮಾಜಿ ಸಿಎಂ ಸಿಎಂ ಸ್ಥಾನಕ್ಕೆ ಖರ್ಗೆ ಹೆಸರನ್ನು ಸೇರಿಸಿ ಜೆಡಿಎಸ್​ನಲ್ಲಿ ಸಂಚಲನ ಮೂಡಿಸಿದ್ದಾರೆ. “ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳಲ್ಲಿ ಹಲವರಿಗೆ ಸಿಎಂ ಸ್ಥಾನದ ಅರ್ಹತೆಯಿದೆ. ಅಂತೆಯೇ ರೇವಣ್ಣ ಕೂಡ ಸಿಎಂ ಆಗಿರುವ ಅರ್ಹತೆ ಹೊಂದಿದ್ದಾರೆ” ಅಂತ ಟ್ವೀಟ್​ ಮಾಡಿದ್ದಾರೆ.

Exit mobile version