Site icon PowerTV

ಹಾಲಿ, ಮಾಜಿ ಸಿಎಂ ಒಂದೇ ಹೋಟೆಲ್​ನಲ್ಲಿದ್ದರೂ ಮಾತಿಲ್ಲ, ಕಥೆ ಇಲ್ಲ..!

ಹುಬ್ಬಳ್ಳಿ: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮುನಿಸು ಹುಬ್ಬಳ್ಳಿಯಲ್ಲಿ ಬಹಿರಂಗವಾಗಿದೆ. ಒಂದೇ ಹೋಟೆಲ್​ನಲ್ಲಿದ್ದರೂ ಇಬ್ಬರೂ ನಾಯಕರು ಪರಸ್ಪರ ಭೇಟಿ ಮಾಡಿಲ್ಲ.

ಸಿಎಂ ತಂಗಿದ್ದ ಹೊಟೇಲ್​ಗೆ ಸಿದ್ದರಾಮಯ್ಯ ಅವರು ಬೆಳಗ್ಗೆ ಆಗಮಿಸಿದ್ದರು. ಜೆಡಿಎಸ್​ ಪಕ್ಷದ ಕೆಲ ಮುಖಂಡರನ್ನು ಭೇಟಿಯಾದ ಸಿದ್ದರಾಮಯ್ಯ ಬಸವರಾಜ್​ ಹೊರಟ್ಟಿ, ಸಚಿವ ಬಂಡೆಪ್ಪ ಕಾಶಂಪೂರ್​ ಸೇರಿ ಹಲವರ ಜೊತೆ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಸಚಿವ ಜಮೀರ್ ಅಹ್ಮದ್ ಜೊತೆ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಆದರೆ ಹಾಲಿ ಮತ್ತು ಮಾಜಿ ಸಿಎಂ ಪರಸ್ಪರ ಭೇಟಿ ಮಾಡದೇ ಇರೋದು ಮೈತ್ರಿ ಸರ್ಕಾರದ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

Exit mobile version