Site icon PowerTV

‘ಧೋನಿ ಆಟಗಾರ ಮಾತ್ರವಲ್ಲ ಅವರೇ ಕ್ರಿಕೆಟ್ ಯುಗ’..!

ಟೀಮ್​ ಇಂಡಿಯಾದ ಮಾಜಿ ನಾಯಕ, ಭಾರತಕ್ಕೆ ಎರಡೆರಡು ವರ್ಲ್ಡ್​ಕಪ್ ಅನ್ನು ಭಾರತಕ್ಕೆ ತಂದು ಕೊಟ್ಟ ಜಗಮೆಚ್ಚಿದ ಕ್ರಿಕೆಟಿಗ. ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ 3 ಭಾರಿ ಆ ತಂಡವನ್ನು ಚಾಂಪಿಯನ್ ಪಟ್ಟದಲ್ಲಿ ಕೂರಿಸಿದ ಚಾಂಪಿಯನ್ ಆಟಗಾರ.
ನಿನ್ನೆಯಷ್ಟೇ ಮುಕ್ತಾಯವಾದ 12ನೇ ಆವೃತ್ತಿಯ ಐಪಿಎಲ್​ನಲ್ಲಿ ಕೇವಲ ಒಂದೇ ಒಂದು ರನ್​ಗಳಿಂದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​ಗೆ ಶರಣಾಯಿತು. ಮುಂಬೈ ಈ ಮೂಲಕ 4ನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ವಲ್ಪದರಲ್ಲೇ 4ನೇ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಧೋನಿ ಪಡೆ ಮಿಸ್​ ಮಾಡಿಕೊಂಡಿತು.
ಅದೇನೇ ಇದ್ದರು ಧೋನಿ ಮಾತ್ರ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಂತಾಗಿದೆ. ಕೆಲವು ಸರಣಿ, ಪಂದ್ಯಗಳನ್ನು ಸೋತ ಮಟ್ಟಿಗೆ ಧೋನಿಯ ತಾಕತ್ತನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಎಲ್ಲಾ ಮ್ಯಾಚ್​ಗಳಲ್ಲೂ ಯಶಸ್ಸು ಕಾಣುವುದು ಅಸಾಧ್ಯ. ಧೋನಿ ಇಡೀ ವಿಶ್ವಕ್ರಿಕೆಟೇ ಮೆಚ್ಚು ಮಹಾನ್ ಆಟಗಾರ ಅನ್ನುವುದರಲ್ಲಿ ನೋ ಡೌಟ್.
ಧೋನಿಯ ಗುಣಗಾನ ಮಾಡದೇ ಇರೋರು ತುಂಬಾ ಕಮ್ಮಿ. ಇಷ್ಟೆಲ್ಲಾ ಹೇಳೋಕೆ ಕಾರಣ ಆಸ್ಟ್ರೇಲಿಯಾದ ಮಾಜಿ ಓಪನರ್ ಮ್ಯಾಥ್ಯು ಹೇಡನ್. ಆಸೀಸ್​ ಕ್ರಿಕೆಟ್​ ನ ಲೆಜೆಂಡ್​ ಗಳಲ್ಲಿ ಮ್ಯಾಥ್ಯು ಹೇಡನ್ ಕೂಡ ಒಬ್ರು. ಮ್ಯಾಥ್ಯು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಗುಣಗಾನ ಮಾಡಿದ್ದಾರೆ.
ಹಿಂದೆ ಧೋನಿ ನಾಯಕತ್ವದ ಚೆನ್ನೈ ಪರ ಆಡಿದ್ದ ಮ್ಯಾಥ್ಯು ಹೇಡನ್ ‘ಸಿಎಸ್​ಕೆ -ದಿ ಸೂಪರ್ ಕಿಂಗ್ಸ್’ ಅನ್ನೋ ಕಾರ್ಯಕ್ರಮವೊಂದರಲ್ಲಿ ಧೋನಿ ಬಗ್ಗೆ ಮಾತಾಡಿದ್ದಾರೆ. ”ಧೋನಿ ಆಟಗಾರನಷ್ಟೇ ಅಲ್ಲ. ಅವರು ಕ್ರಿಕೆಟಿನ ಒಂದು ಯುಗ. ಆತ ಕ್ರಿಕೆಟಿಗನಾಗಿದ್ದರೂ ಹೆಚ್ಚುಕಡಿಮೆ ಅವರೊಬ್ಬ ರಾಷ್ಟ್ರನಾಯಕನಂತೆ” ಅಂತ ಹೇಡನ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ಧೋನಿ ನಮ್ಮಳೊಗೊಬ್ಬ.. ಅವರು ಏನನ್ನೂ ಮಾಡಬಲ್ಲರು, ಎಲ್ಲೂ ಆಡಬಲ್ಲರು ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ.

Exit mobile version