Site icon PowerTV

ಸತ್ಯವೂ ಗೊತ್ತಿಲ್ಲ, ಸುಳ್ಳೂ ಗೊತ್ತಿಲ್ಲ – ಸರ್ಕಾರ ಬೀಳಿಸೋಕಾಗಲ್ಲ..!

ಕಲಬುರಗಿ: ರಾಜ್ಯ ಸರ್ಕಾರ ಬೀಳಿಸೋಕೆ ಯಡಿಯೂರಪ್ಪಗೆ ಸಾಧ್ಯವೇ ಇಲ್ಲ. ಆರ್​. ಅಶೋಕ್​ಗೆ ಏನು ಗೊತ್ತಿದೆ, ಸತ್ಯವೂ ಗೊತ್ತಿಲ್ಲ, ಸುಳ್ಳೂ ಗೊತ್ತಿಲ್ಲ ಅಂತ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಆರ್​. ಅಶೋಕ್​​ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “20 ಶಾಸಕರು ಬರುತ್ತಾರೆಂಬ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಏ ಥೂ… ಅವನಿಗೇನು ಸತ್ಯಾನೂ ಗೊತ್ತಿಲ್ಲ, ಸುಳ್ಳೂ ಗೊತ್ತಿಲ್ಲ. ಅವನೇನು ಮಾತಾಡ್ತಾನೆ ಅಂತ ಅವನಿಗೇ ಅರ್ಥ ಆಗಲ್ಲ, ತಳ‌ ಇರಲ್ಲ ಬುಡ ಇರಲ್ಲ” ಅಂತ ಟೀಕಿಸಿದ್ದಾರೆ. “ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಲು ಸಾಧ್ಯವೇ ಇಲ್ಲ. ಮೋದಿ ಮತ್ತೆ ಪ್ರಧಾನಿ ಆಗಲ್ಲ, ರಾಹುಲ್ ಪ್ರಧಾನಿ ಆಗ್ತಾರೆ” ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version