Site icon PowerTV

ತಿಪ್ಪರಲಾಗ ಹಾಕಿದ್ರೂ ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ

ಕಲಬುರ್ಗಿ: ಯಡಿಯೂರಪ್ಪ ತಿಪ್ಪರಲಾಗ ಹಾಕಿದ್ರೂ ಮತ್ತೆ ಸಿಎಂ ಆಗಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿಂಚೋಳಿ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, “ಎಲ್ಲಾ ಪಕ್ಷಗಳಲ್ಲಿ ಅತೃಪ್ತರು ಇದ್ದೇ ಇರುತ್ತಾರೆ. ಕಾಂಗ್ರೆಸ್​ನ 20 ಶಾಸಕರು ಬಿಜೆಪಿ ಸೇರ್ತಾರೆ ಅಂತ ಹೇಳ್ತಾರೆ. ಹಾಗಾದ್ರೆ ಇವ್ರಿಗೆಲ್ಲ ಕೊಡೋಕೆ ಹಣ ಎಲ್ಲಿಂದ ಬಂತು..?”  ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಂಚೋಳಿ ಕ್ಷೇತ್ರದ ಉಪಸಮರ ಕಾವೇರಿದ್ದು, ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. ಕೊಂದಗೋಳದಲ್ಲಿ ಡಿ. ಕೆ. ಶಿವಕುಮಾರ್ ಪ್ರಚಾರ ನಡೆಸಿದ್ದು, ಅಬ್ಬರದ ಪ್ರಚಾರ ಮುಂದುವರಿದಿದೆ. ಸಿದ್ದರಾಮಯ್ಯ ಅವರು ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಮತಬೇಟೆ ನಡೆಸಿದ್ದಾರೆ.

Exit mobile version