Site icon PowerTV

ಶಿವಳ್ಳಿ ಕುರಿತ ಹೇಳಿಕೆ ತಿರುಚಲಾಗಿದೆ: ಶ್ರೀರಾಮುಲು

ಬಳ್ಳಾರಿ: ಮಾಜಿ ಸಚಿವ ದಿ. ಸಿ.ಎಸ್​. ಶಿವಳ್ಳಿ ಕುರಿತ ಹೇಳಿಕೆಯನ್ನು ತಿರುಚಲಾಗಿದೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಶಿವಳ್ಳಿ ಸಾವಿನ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಿವಳ್ಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರ ಇಲಾಖೆಯಲ್ಲಿ ಸಿಎಂ ಸೇರಿದಂತೆ ಇತರರ ಹಸ್ತಕ್ಷೇಪವಿತ್ತು. ಆ ಕಾರಣಕ್ಕೆ ಸಚಿವರಾಗಿದ್ದ ಶಿವಳ್ಳಿ ಬಹಳ ನೊಂದಿದ್ದರು. ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಹೊರತು ಬೇರೆ ಅರ್ಥವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀರಾಮುಲು ವಿರುದ್ಧ ದೋಸ್ತಿ ನಾಯಕರು ದೂರು ದಾಖಲಿಸಲಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿ, “ಕೇಸ್​ ಹಾಕ್ತಾರೆ ಎಂಬುದರ ಬಗ್ಗೆ ನನಗೂ ಮಾಹಿತಿ ಇದೆ. ನನ್ನ ಹೇಳಿಕೆಯನ್ನ ಬೇರೆ ರೀತಿ ಅರ್ಥೈಸಲಾಗಿದೆ” ಅಂತ ದೋಸ್ತಿ ವಿರುದ್ಧ ಗುಡುಗಿದ್ದಾರೆ.

ಸಚಿವ ಡಿ. ಕೆ. ಶಿವಕುಮಾರ್ ಸೂಚನೆ ಮೇರೆಗೆ ಕೈ ನಾಯಕರು ಶಾಸಕ ಶ್ರೀರಾಮುಲು ವಿರುದ್ಧ ಇಂದು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಿಸಲು ತೀರ್ಮಾನಿಸಿದ್ದಾರೆ. ಶಿವಳ್ಳಿ ಬಗ್ಗೆ ಶ್ರೀರಾಮುಲು ನೀಡಿರೋ ಹೇಳಿಕೆ ವಿರುದ್ಧ ಮೈತ್ರಿ ನಾಯಕರು ಸಂಸದ ವಿ. ಎಸ್. ಉಗ್ರಪ್ಪ ನೇತೃತ್ವದಲ್ಲಿ ಇಂದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

Exit mobile version