Site icon PowerTV

ಬಿಜೆಪಿ ಕಾರ್ಯಕರ್ತರ ಕೈಕುಲುಕಿದ ಡಿಕೆಶಿ..!

ಹುಬ್ಬಳ್ಳಿ: ಕುಂದಗೋಳ ಉಪಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭ ಸಚಿವ ಡಿ. ಕೆ. ಶಿವಕುಮಾರ್ ಅವರು ಬಿಜೆಪಿ ಕಾರ್ಯಕರ್ತರ ಕೈಕುಲುಕಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ಬೆಟದೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಕೈಕುಲುಕಿ ನಮಸ್ಕರಿಸಿದ್ದಾರೆ. ಇದೇ ಸಂದರ್ಭ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ವೀರಸೌಧಕ್ಕೆ ಡಿಕೆಶಿ ಭೇಟಿ ನೀಡಿ ವೀರಸೌಧದ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. “ಏನಾದ್ರೂ ಕೆಲಸವಿದ್ರೆ ಬನ್ನಿ, ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗಾದ್ರೂ ಚುನಾವಣೆ ಮಾಡಿ ನಮ್ಮ ಬಗ್ಗೆ ವಿಶ್ವಾಸವಿರಲಿ. ಶಿವಳ್ಳಿ ನನ್ನ ಸ್ನೇಹಿತರಾಗಿದ್ರು” ಎಂದು ಹೇಳಿದ್ದಾರೆ.

Exit mobile version