ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದತ್ತ ಚಿತ್ತ ಹರಿಸಿದ್ದಾರಾ ಅನ್ನೋ ಕುತೂಹಲ ಮೂಡಿದೆ. ಕುಮಾರಸ್ವಾಮಿ ಜೊತೆ ದೂರವಾಣಿಯಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಚರ್ಚೆ ನಡೆಸಿದ್ದಾರೆ. ಅನೇಕ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಡಿಕೆ ಮತ್ತು ಕೆಸಿಆರ್ ಸಮಾಲೋಚನೆ ನಡೆಸಿದ್ದಾರೆ.
ತೃತೀಯ ರಂಗದ ನಾಯಕರನ್ನು ಒಗ್ಗೂಡಿಸಲು ಕಸರತ್ತು ನಡೆದಿದ್ದು, ಇಂದು ಸಂಜೆ ಕೇರಳ ಸಿಎಂ ಜೊತೆಗೂ ಕೆಸಿಆರ್ ಸಮಾಲೋಚನೆ ನಡೆಸಲಿದ್ದಾರೆ. ಮೇ.14ರಂದು ಡಿಎಂಕೆ ನಾಯಕರ ಜೊತೆಗೂ ಕೆಸಿಆರ್ ಚರ್ಚಿಸುತ್ತಾರೆ. ಡಿಎಂಕೆ ನಾಯಕ ಸ್ಟಾಲಿನ್ ಅವರೊಡನೆಯೂ ಸಮಾಲೋಚನೆ ನಡೆಸಲಿದ್ದಾರೆ.
ಹೀಗೆ ಲೋಕಸಭಾ ಫಲಿತಾಂಶದ ನಂತ್ರ ರಾಜಕೀಯ ಧ್ರುವೀಕರಣ ಸಾಧ್ಯತೆ ಇದ್ದು, ಸಿಎಂ ಕುಮಾರಸ್ವಾಮಿ ದೆಹಲಿ ರಾಜಕಾರಣದತ್ತ ಹೋಗ್ತಾರಾ ಅನ್ನೋ ಕುತೂಹಲಕ್ಕೆ ಯಡಮಾಡಿಕೊಟ್ಟಿದೆ.
