Site icon PowerTV

ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿ ಇಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಎಲ್ಲ ಕಡೆ ಆಪರೇಷನ್ ಕಮಲ ಮಾಡ್ತಿದಾರೆ. ಇರೋ ಸರ್ಕಾರವನ್ನ ಅಸ್ಥಿರ ಮಾಡ್ತಿದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ. ಮೋದಿ ಕಾಲದಲ್ಲಿ ಇದು ಕಾಮನ್ ಆಗಿದೆ” ಎಂದಿದ್ದಾರೆ.

ಮೈತ್ರಿ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ, “ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಅಲ್ಲಲ್ಲಿ ಅಸಮಾಧಾನ ‌ಇದೆ. ಮುಂದಿನ ದಿನಗಳಲ್ಲಿ ಎಲ್ಲ ಸರಿಹೋಗಲಿದೆ. ಅದರಿಂದ ‌ಸರ್ಕಾರಕ್ಕೆ ಏನೂ ಧಕ್ಕೆ ಇಲ್ಲ” ಅಂತ ಹೇಳಿದ್ರು.

ಕೃಷ್ಣಾ ನದಿಗೆ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈಗಾಗಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ‌ನಡೆಸಲಾಗಿದೆ. ಇಂದು‌ ಅಥವಾ ನಾಳೆ ನೀರು ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಂದಗೋಳ ಉಪ ಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ ಅವರಿಗೆ ವಹಿಸಿದ್ದಕ್ಕೆ ತಮಗೆ ಯಾವುದೇ‌ ಅಸಮಾಧಾನವಿಲ್ಲ ಅಂತ ಹೇಳಿದ್ದಾರೆ.

Exit mobile version