Site icon PowerTV

ಜೆಡಿಎಸ್​ ಕಾರ್ಯಕರ್ತರಿಂದ ಬಿಜೆಪಿಗೆ ಮತ..!

ಮೈಸೂರು: ಲೋಕ ಸಮರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ ಅಂತ ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಅವರು, “ಸ್ಥಳೀಯ ಸಂಸ್ಥೆ ಚುನಾವಣೆ ರೀತಿಯಲ್ಲೇ ಜಿದ್ದಿನಿಂದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉದ್ಭೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ. ಮೈತ್ರಿ ತಡವಾಗಿದ್ರಿಂದ ಕಾರ್ಯಕರ್ತರ ನಡುವಿನ ಜಿದ್ದು ಸರಿ ಮಾಡಲು ಆಗಲಿಲ್ಲ. ಎರಡು ಪಕ್ಷದವರು ಎರಡು ತಿಂಗಳ ಮುಂಚೆ ಒಟ್ಟಾಗಿ ಸೇರಿ ಮಾತಾಡಬೇಕಿತ್ತು. ಆಗ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಬಿಜೆಪಿ ರಾಜ್ಯದಲ್ಲಿ ಎಲ್ಲೂ ಗೆಲ್ಲುತ್ತಿರಲಿಲ್ಲ. ಮೈತ್ರಿ ವಿಚಾರದಲ್ಲಿ ಎರಡು ಕಡೆ ಪಕ್ಷದವರಿಂದಲೂ ತಪ್ಪಾಗಿದೆ” ಅಂತ ಹೇಳಿದ್ದಾರೆ.

Exit mobile version