Site icon PowerTV

ರೆಸಾರ್ಟ್​ಗೆ ಸಿಎಂ – ಆಸುಪಾಸಿನಲ್ಲಿ ಮಾಧ್ಯಮಗಳಿಗೆ ನಿರ್ಬಂಧ..!

ಉಡುಪಿ: ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹಾಗೂ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು ಮತ್ತೆ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾರೆ. ಉಪ ಕದನದ ನಡುವೆಯೂ ಉಡುಪಿ ರೆಸಾರ್ಟ್‌ಗೆ ಪ್ರಯಾಣಿಸಿರುವ ತಂದೆ ಹಾಗೂ ಮಗ ಸಾಯಿರಾಧಾ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಐದು ದಿನ ಇಬ್ಬರೂ ನಾಯಕರು ರೆಸಾರ್ಟ್‌ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.

ರೆಸಾರ್ಟ್‌ ಆಸುಪಾಸಿನಲ್ಲಿ ಮಾಧ್ಯಮಗಳಿಗೆ ಮತ್ತೆ ನಿರ್ಬಂಧ ಹೇರಿದ್ದು ವರದಿಗಾರಿಕೆಗೆ ತೆರಳಿದ ವರದಿಗಾರರು ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆದಿದೆ. ಸಿಎಂ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಪದೇ ಪದೇ ಸಿಎಂ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದು ಮಂಡ್ಯ ಫಲಿತಾಂಶದ ಬಗ್ಗೆ ಸಿಎಂ ಸಿಕ್ಕಾಪಟ್ಟೆ ತೆಲೆ ಕೆಡಿಸಿಕೊಂಡ್ರಾ ಅನ್ನೋ ಪ್ರಶ್ನೆ ಮೂಡಿದೆ.

Exit mobile version