Site icon PowerTV

ಬೈ ಎಲೆಕ್ಷನ್​ – ಅವಿನಾಶ್ ಜಾಧವ್ ನಾಮಪತ್ರ ಸಲ್ಲಿಕೆ

ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಉಪ ಕದನ ರಂಗೇರಿದ್ದು ಇಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಚಿಂಚೋಳಿಯಲ್ಲಿ ಸುಭಾಷ್ ರಾಥೋಡ್‌ ಉಮೇದುವಾರಿಕೆ ಸಲ್ಲಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಗೆ ಕೈ ನಾಯಕರ ದಂಡು ಸಾಥ್‌ ನೀಡಿದ್ದು, ಡಿಸಿಎಂ ಜಿ. ಪರಮೇಶ್ವರ್​ ಅವರೂ ಜೊತೆಗೂಡಿದ್ದಾರೆ.

ಉಮೇಶ್‌ ಜಾಧವ್ ಪುತ್ರ ಅವಿನಾಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೂ ಅವಿನಾಶ್‌ ಜಾಧವ್ ದೇಗುಲಯಾತ್ರೆ ಮಾಡಿದ್ದಾರೆ. ರಟಕಲ್‌ನ ರೇವಣ ಸಿದ್ದೇಶ್ವರ ದೇವಸ್ಥಾನದಲ್ಲಿ ಅವಿನಾಶ್ ಪೂಜೆ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿಗೆ ಮಾಜಿ ಸಚಿವ ಸೋಮಣ್ಣ, ಲಕ್ಷ್ಮಣ್ ಸವದಿ ಸಾಥ್ ನೀಡಿದ್ದಾರೆ.

ಧಾರವಾಡದ ಕುಂದಗೋಳದಲ್ಲಿ ಬೈಎಲೆಕ್ಷನ್​ಗೆ ಇಂದು ಉಭಯ ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಕುಸುಮ ಶಿವಳ್ಳಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಎಸ್.ಐ.ಚಿಕ್ಕನಗೌಡ ಉಮೇದುವಾರಿಕೆ ಸಲ್ಲಿಸಿದ್ದಾರೆ.

Exit mobile version