Site icon PowerTV

‘ಸರ್ಕಾರ ಬೀಳಿಸುವಷ್ಟು ಸಂಖ್ಯಾ ಬಲ ರಮೇಶ್​​ ಜಾರಕಿಹೊಳಿ ಬಳಿ ಇಲ್ಲ’..!

ಬೆಳಗಾವಿ: ಸರ್ಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ ಜಾರಕಿಹೊಳಿ ಬಳಿ ಇಲ್ಲ ಅಂತ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ” ಮೂರ್ನಾಲ್ಕು ಬಾರಿ ಸರ್ಕಾರ ಕೆಡವಲು ಪ್ರಯತ್ನಿಸಿದ್ರೂ ಆಗಿಲ್ಲ. ಈಗಲೂ ಅದನ್ನೇ ಮಾಡ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳೋ ಶಕ್ತಿ ಕಾಂಗ್ರೆಸ್​ಗೂ ಇದೆ, ಜೆಡಿಎಸ್​ನವರಿಗೂ ಇದೆ” ಎಂದಿದ್ದಾರೆ.

ರಮೇಶ ಜಾರಕಿಹೊಳಿ ಇಂದು ತಮ್ಮ ಬೆಂಬಲಿಗರ ಜೊತೆ ರಾಜೀನಾಮೆ ನೀಡ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, “ಎರಡು ದಿನದಿಂದ ಏನು ಹೇಳಬೇಕೋ ಅದನ್ನ ಹೇಳಿದ್ದೀನಿ, ದಿನಾ ದಿನಾ ಅದನ್ನೇ ಹೇಳೋಕೆ ನಾನು ಖಾಲಿ ಇಲ್ಲ. ರಮೇಶ ಜಾರಕಿಹೊಳಿ ಖಾಲಿ ಇದ್ದಾನೆ. ಅವನಿಗೆ ಬೇರೆ ಕೆಲಸ ಇಲ್ಲ. ಮುಂಜಾನೆಯೊಂದು ಸಂಜೆಯೊಂದು ಮಾತಾಡ್ತಾನೆ. ಅವನಿಗೆ ಬದ್ಧತೆ ಇಲ್ಲ. ನಿನ್ನೆ ರಾಜೀನಾಮೆ ಕೊಡ್ತಿನಿ ಅಂದಾ, ಸಂಜೆ ಕೊಡಲ್ಲ ಅಂದ. ಆತನಿಗೆ ಬದ್ಧತೆ ಇಲ್ಲ. ಪದೇ ಪದೇ ಅವನ ಬಗ್ಗೆ ಹೇಳೋದ್ರಲ್ಲಿ ಅರ್ಥವಿಲ್ಲ” ಅಂತ ಹೇಳಿದ್ರು.

ಅಥಣಿ ಶಾಸಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರಿನತ್ತ ಪ್ರಯಾಣ ಮಾಡಿರೋ ಬಗ್ಗೆ ಪ್ರತಿಕ್ರಿಯಿಸಿ, “ಈ ಬಗ್ಗೆ ನನಗೆ ಗೊತ್ತಿಲ್ಲ. ರಮೇಶ ಇರಲಿ ಮಹೇಶ ಇರಲಿ ರಾಜೀನಾಮೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಅಥಣಿ ಶಾಸಕ ಮಹೇಶ ಕುಮಟೊಳ್ಳಿ ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ತನ್ನ ಸಮಸ್ಯೆ ಏನಿದೆ ಅಂತ ಹೇಳಬೇಕು. ಹೇಳದೇ ಯಾರಿಗೂ ಗೊತ್ತಾಗಲ್ಲ. ಜನರಿಗೂ ಕ್ಯೂರಾಸಿಟಿ ಇದೆ. ತನ್ನ ಅಳಿಯ ಅಂಬಿರಾವ ಗೆ ಮಹಾರಾಷ್ಟ್ರದ ಗಡಿಹಿಂಗ್ಲಜ್ ಕ್ಷೇತ್ರದ ಟಿಕೇಟ ಕೊಡಿಸಲು ರಮೇಶ ಬಿಜೆಪಿ ಸೇರುತ್ತಿದ್ದಾರೆ. ಉಳಿದ 9 ಕಾರಣಗಳು ಗೊತ್ತಿಲ್ಲ” ಅಂತ ಹೇಳಿದ್ದಾರೆ.

Exit mobile version