ಮಂಡ್ಯ : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ನಮಗೆ ಅನಿವಾರ್ಯ ಅಲ್ಲ ಎಂದಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಕಾಂಗ್ರೆಸ್ ಸಹಕಾರದಿಂದ ಚುನಾವಣೆ ಎದುರಿಸಿರುವೆ. ನಮ್ಮ ಕುಟುಂಬ ದ್ವೇಷದ ರಾಜಕಾರಣ ಮಾಡೋದಿಲ್ಲ. ಆದರೂ ನಮ್ಮ ವಿರುದ್ಧ ಆರೋಪ ಮಾಡೋದನ್ನ ನಿಲ್ಲಿಸಿಲ್ಲ. ದ್ವೇಷದ ರಾಜಕಾರಣ ನಮಗೆ ಅನಿವಾರ್ಯವಲ್ಲ. ಯಾವುದೇ ಆರೋಪಕ್ಕೂ ನಾನು ಪ್ರತಿಕ್ರಿಯೆ ನೀಡಲ್ಲ. ನಾವು ಯಾವ ರೀತಿ ಟಾರ್ಗೆಟ್ ಮಾಡ್ತಾ ಇದ್ದೀವಿ? ಸುಮ್ಮನೆ ಸಮಯ ವ್ಯರ್ಥ ಮಾಡಲು ನಾವು ರೆಡಿ ಇಲ್ಲ. ಜಮೀನು ಖರೀದಿ ವಿಚಾರ ನಾನೇ ಹೇಳಿದ್ದು. ಜಮೀನು ಖರೀದಿ ಎರಡ್ಮೂರು ದಿನದ ಕೆಲಸವಲ್ಲ. ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಿದ್ದಾರೆ. ಅನುದಾನವನ್ನು ಅನುಷ್ಠಾನಕ್ಕೆ ತರಲು ಕೆಲಸ ಮಾಡುತ್ತೇವೆ” ಎಂದರು.
