Site icon PowerTV

‘ನಾನು ಮುಖ್ಯಮಂತ್ರಿ ಆಗ್ತೀನಿ, ಉಪ ಮುಖ್ಯಮಂತ್ರಿ ಅಲ್ಲ’ : ಇದು ‘ಕತ್ತಿ’ ವರಸೆ

ಚಿಕ್ಕೋಡಿ : ನಾನು ಮುಖ್ಯಮಂತ್ರಿ ಆಗುತ್ತೇನೆ, ಉಪ ಮುಖ್ಯಮಂತ್ರಿ ಅಲ್ಲ ಅಂತ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಹೊಸ ವರಸೆ ತೆಗೆದಿದ್ದಾರೆ.
ಮತ್ತೊಮ್ಮೆ ಸಿಎಂ ಆಗಲು ಯಡಿಯೂರಪ್ಪ ಅವರು ತುದಿಗಾಲಲ್ಲಿ ನಿಂತಿದ್ದಾರೆ. ಕೇಂದ್ರದಲ್ಲಿ ಹೊಸ ಸರ್ಕಾರ ಬರುತ್ತಿದ್ದಂತೆ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಆದರೆ, ಈಗ ಉಮೇಶ್ ಕತ್ತಿ ತಾನೂ ಸಿಎಂ ಆಗುವುದಾಗಿ ಹೇಳಿಕೊಂಡಿದ್ದಾರೆ. ಬಿಎಸ್​ವೈ ಪಟ್ಟಕ್ಕೇರುವ ಮೊದಲೇ ಉಮೇಶ್​ ಕತ್ತಿ ಸಿಎಂ ಆಗೋದಾಗಿ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿಲ್ಲ, ಬಜೆಟ್​ನಲ್ಲಿ ಶೇ. 90ರಷ್ಟು ದಕ್ಷಿಣ ಕರ್ನಾಟಕಕ್ಕೆ ಹೋಗುತ್ತಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಅನ್ನೋದು ನಮ್ಮ ಆಶಯ ಅಂತ ಕತ್ತಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಎಂ ಕುರ್ಚಿಗೆ ಕಾಂಗ್ರೆಸ್​ನಲ್ಲಿ ಮಾತ್ರ ರೇಸ್ ಇಲ್ಲ.. ಬಿಜೆಪಿಯಲ್ಲೂ ರೇಸ್​ ನಡೆಯುತ್ತಿದೆ.

Exit mobile version