Site icon PowerTV

ಕೊಪ್ಪಳದಲ್ಲಿ ‘ಚಪ್ಪಲಿ’ ಧರಿಸಲು ಮತದಾರರಿಗೆ ಅನುಮತಿ..!

ಕೊಪ್ಪಳ : ಮತದಾನ ಕೇಂದ್ರದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಚುನಾವಣಾ ಚಿಹ್ನೆ ಇರಬಾರದು ಅನ್ನೋ ನಿಯಮದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯ ಮತಗಟ್ಟೆಗೆ ಚಪ್ಪಲಿ ಹಾಕಿಕೊಂಡು ಬರಬಹುದೇ..? ಅಥವಾ 100 ಮೀಟರ್ ವ್ಯಾಪ್ತಿಯ ಆಚೆ ಚಪ್ಪಲಿ ಕಳಚಿಟ್ಟು ಬರಬೇಕೇ ಅನ್ನೋ ಗೊಂದಲ ಏರ್ಪಟ್ಟಿತ್ತು. ಅಲ್ಲಿನ ಪಕ್ಷೇತರ ಅಭ್ಯರ್ಥಿ ಪ.ಯ ಗಣೇಶ್​ ಅವರ ಚುನಾವಣಾ ಚಿಹ್ನೆ ‘ಚಪ್ಪಲಿ’ ಆಗಿರೋದ್ರಿಂದ ಈ ವಿವಾದ ಎದ್ದಿತ್ತು.
ಈಗ ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಬಗೆಹರಿಸಿದ್ದಾರೆ. ಚಪ್ಪಲಿ ಧರಿಸಿಕೊಂಡೇ ಮತಚಲಾಯಿಸಬಹುದು ಅಂತ ಡಿಸಿ ಪಿ. ಸುನೀಲ್​ಕುಮಾರ್​ ಅವರು ತಿಳಿಸಿದ್ದಾರೆ. ಮತಗಟ್ಟೆಯಲ್ಲೇ ಅನೇಕ ಚಿಹ್ನೆಗಳಿರುತ್ತವೆ. ಆದ್ದರಿಂದ ಇದಕ್ಕೆ ಅಂಥಾ ನಿರ್ಬಂಧ ಇಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

Exit mobile version