Site icon PowerTV

‘ನಮ್ಮ ಶಾಸಕರನ್ನು ಉಳಿಸಿಕೊಳ್ಳೋ ಕೆಲಸ ನಮ್ಮದು’ : ಸಿಎಂ

ಹಾಸನ : ನಮ್ಮ ಶಾಸಕರನ್ನು ಉಳಿಸಿಕೊಳ್ಳೋ ಕೆಲಸ ನಾವು ಮಾಡುತ್ತೇವೆ ಅಂತ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.
ಹಾಸನದಲ್ಲಿ ಮಾತನಾಡಿದ ಅವರು, ಮೇ 23ರ ನಂತರ ಸರ್ಕಾರ ಬೀಳಲಿದೆ ಅನ್ನೋ ಬಿಜೆಪಿ ಗಡುವಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ”ಈ ಸುದ್ದಿ ಹೊಸದಲ್ಲ. ಎಲ್ಲರನ್ನೂ ವಿಶ್ವಾಸ ಪಡೆಯೋ ಕೆಲಸವನ್ನು ಮಾಡಲಾಗುವುದು. ಯಾರು ಏನು ಹೇಳಿದ್ದಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್​ – ಜೆಡಿಎಸ್​ ನಾಯಕರು ಸೇರಿ ಸರ್ಕಾರವನ್ನು ಸುಭದ್ರವಾಗಿ ನಡೆಸಬೇಕಿದೆ. ಸರಕಾರ ಬೀಳಿಸಲು ಬಿಜೆಪಿಯ ಎಲ್ಲಾ ನಾಯಕರು ಕಾಯುತ್ತಿದ್ದಾರೆ. ನಮ್ಮ ಶಾಸಕರನ್ನು ಉಳಿಸಿಕೊಳ್ಳೋ ಕೆಲಸ ನಾವು ಮಾಡುತ್ತೇವೆ” ಎಂದರು. ಡ್ರಾಮಾ ಮಾಡುವವರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ ಅಂತ ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ವ್ಯಂಗ್ಯವಾಡಿದ ಸಿಎಂ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 3 ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version