Site icon PowerTV

ಸಂತಾಪ ಸೂಚಕವಾಗಿ ಐಫೆಲ್ ಟವರ್ ಲೈಟ್ ಆಫ್​..!

ಪ್ಯಾರಿಸ್: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 290ಕ್ಕೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಐಫೆಲ್ ಟವರ್​​​ನಲ್ಲಿ ಲೈಟ್​ಗಳನ್ನು ಆರಿಸಲಾಗಿತ್ತು. ಫ್ರಾನ್ಸ್​ನ ಪ್ಯಾರಿಸ್​ ನಗರದಲ್ಲಿರುವ ವಿಶ್ವ ಪ್ರಸಿದ್ಧ ಐಫೆಲ್ ಟವರ್​ನಲ್ಲಿ​ ನಿನ್ನೆ ಸಂಪೂರ್ಣ ಕತ್ತಲೆಯಾವರಿಸಿತ್ತು. ಸ್ಫೋಟದಲ್ಲಿ ಸಾವನ್ನಪ್ಪಿಸ ಸಂತ್ರಸ್ತರಿಗೆ ಸಂತಾಪ ಸೂಚಕವಾಗಿ ಐಫೆಲ್ ಟವರ್​ನಲ್ಲಿ ದೀಪಗಳನ್ನು ನಿನ್ನೆ ಬೆಳಗಿಸಿಲ್ಲ.

“ಶ್ರೀಲಂಕಾ ಸರಣಿ ಸ್ಫೋಟದ ಸಂತ್ರಸ್ತರಿಗೆ ಸಂತಾಪ ಸೂಚಿಸುವ ಸಲುವಾಗಿ ಇಂದು ರಾತ್ರಿ 12 ಗಂಟೆಯಿಂದ ನನ್ನ ದೀಪಗಳನ್ನು ಆರಿಸಲಿದ್ದೇನೆ” ಅಂತ ಐಫೆಲ್ ಟವರ್ ಟ್ವಿಟರ್ ಖಾತೆಯಿಂದ ನಿನ್ನೆ ಟ್ವೀಟ್ ಮಾಡಲಾಗಿತ್ತು. ಈಸ್ಟರ್ ಭಾನುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಚರ್ಚ್​ ಹಾಗೂ ಹೋಟೆಲ್​ಗಳ ಮೇಲೆ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಇಲ್ಲಿಯವರೆಗೂ 290ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ಹಿಂದೆ 2017ರ ಮೇ ತಿಂಗಳಲ್ಲಿ ಮ್ಯಾಂಚೆಸ್ಟರ್​​ನಲ್ಲಿ ಏರಿಯಾನ ಗ್ರಾಂಡೆ ಕಾರ್ಯಕ್ರಮದಲ್ಲಿ ನಡೆದ ದಾಳಿಯಲ್ಲಿ 22 ಜನ ಮೃತಪಟ್ಟಾಗಲೂ ಐಫೆಲ್ ಟವರ್ ಬೆಳಕನ್ನು ನಂದಿಸಲಾಗಿತ್ತು.

Exit mobile version