Site icon PowerTV

ಎಲ್ಲಾ ಕಡೆ ಸಿದ್ದರಾಯ್ಯ ಅವ್ರ ಆತ್ಮ ಇದೆಯಂತೆ..!

ದಾವಣಗೆರೆ : ಮಾಜಿ ಸಿಎಂ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅವರ ಆತ್ಮ ಎಲ್ಲಾ ಕಡೆ ಇದೆಯಂತೆ..! ಸ್ವತಃ ಸಿದ್ದರಾಮಯ್ಯ ಅವರೇ ಈ ಮಾತುನ್ನು ಹೇಳಿದ್ದಾರೆ. ಕೊಪ್ಪಳದಲ್ಲಿ ಸಿದ್ದರಾಮಯ್ಯ ಅವರ ಆತ್ಮ ಇದೆ ಎಂಬ ಬಿ.ಎಲ್ ಸಂತೋಷ್ ಅವರ ಹೇಳಿಕೆಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ”ನನ್ನ ಆತ್ಮ ಎಲ್ಲಾ ಕಡೆ ಇದೆ. ನನ್ನದು ಒಂದೇ ಆತ್ಮ ನನ್ನಲ್ಲಿಯೇ ಇದೆ. ನಾನೇನು ದೇವರಾ? ಎಲ್ಲಾಕಡೆ ನನ್ನ ಆತ್ಮ ಇರೋದಕ್ಕೆ?” ಅಂತ ಪ್ರಶ್ನಿಸಿದ್ರು.
10 ಕೆಜಿ ಅಕ್ಕಿ ಹೇಗೆ ಕೊಡ್ತೀರಿ ಅನ್ನೋ ಶೋಭ ಕರಂದ್ಲಾಜೆ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ”ನಾನು 7 ಕೆಜಿ ಅಕ್ಕಿ ಕೊಡುವಾಗ 10 ಕೆಜಿ ಕೊಡುವುದಕ್ಕೆ ಆಗುವುದಿಲ್ಲವಾ? ಅವ್ರು ಪೆದ್ದಪೆದ್ದಾಗಿ ಮಾತಾಡ್ತಾರೆ, ಅವರಿಗೆ ಬುದ್ಧಿ ಇಲ್ಲ. ನಾನು ಮುಂದೆ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳಿದ್ದೇನೆ. ಮುಂದೆ ನಮ್ಮ ಪಾರ್ಟಿ ಸ್ವಂತ ಶಕ್ತಿ ಮೇಲೆ ಬರುತ್ತದೆ ಆಗ ಅಂತಾ ಹೇಳಿದ್ದು” ಎಂದರು.

Exit mobile version