Site icon PowerTV

ಮಾಜಿ ಸಿಎಂ ಕಾರಿನಲ್ಲಿ ಆಟಿಕೆ ಗೊಂಬೆ..!

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನಲ್ಲಿ ಸಣ್ಣ ಗೊಂಬೆ ಆಟದ ವಸ್ತುಗಳು ಸಿಕ್ಕಿವೆ. ದಾವಣಗೆರೆಗೆ ಮಾಜಿ ಸಿಎಂ‌ ಸಿದ್ದರಾಮಯ್ಯ ಆಗಮನ ಹಿನ್ನೆಲೆ ವಿಧ್ವಂಸಕ ಕೃತ್ಯ ತಪಾಸಣಾ ತನಿಖಾ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

ಪ್ರಚಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರ ಕಾರನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಹೆಲಿಪ್ಯಾಡ್ ಮತ್ತು ಸಿದ್ದರಾಮಯ್ಯ ಪ್ರಯಾಣ ಮಾಡುವ ಕಾರನ್ನು ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಸಿಬ್ಬಂದಿ ಎಲ್ಲ ವಾಹನ ತಪಾಸಣೆ ಮಾಡುತ್ತಿದ್ದು, ಕಾರಿನಲ್ಲಿದ್ದ ಸಣ್ಣ ಗೊಂಬೆಯನ್ನೂ ಬಿಡದೆ, ಆಟದ ಸಾಮಾನುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಗೊಂಬೆಗಳು ಸಿಕ್ಕಿದ್ದು ಅಧಿಕಾರಿಗಳು ಗಲಿಬಿಲಿಯಾಗಿದ್ದಾರೆ.

Exit mobile version