Site icon PowerTV

ಪವರ್​ ಟಿವಿ ಅಭಿಯಾನಕ್ಕೆ ಅನ್ಸುಲ್​ ಸಕ್ಸೇನಾ ಮೆಚ್ಚುಗೆ..!

ಬೆಂಗಳೂರು: ಪವರ್ಟಿವಿ ನಡೆಸುತ್ತಿರುವ ಜಸ್ಟೀಸ್ ಫಾರ್ಮಧು ಅಭಿಯಾನಕ್ಕೆ ಅನ್ಸುಲ್ ಸಕ್ಸೇನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆರಾಯಚೂರಿನ ಮಧು ಪತ್ತಾರ್ ಸಾವಿಗೆ ನ್ಯಾಯ ಬೇಕು ಅಂತ ಪವರ್ ಟಿವಿ ದಿನವಿಡೀ ಸುದ್ದಿ ಬಿತ್ತರಿಸಿತ್ತು. ಪವರ್ ಟಿವಿಯ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪುಲ್ವಾಮಾ ದಾಳಿಯಾದ ಸಂದರ್ಭದಲ್ಲಿ ಪಾಕಿಸ್ತಾನದ ವೆಬ್​​​ಸೈಟ್​​ಗಳನ್ನು ಹ್ಯಾಕ್ ಮಾಡಿ ಜನಮನ್ನಣೆ ಗಳಿಸಿದ್ದ ಅನ್ಸುಲ್ ಸಕ್ಸೇನಾ ಪವರ್ ಟಿವಿಯ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಫೇಸ್​​ಬುಕ್​​ ಪೇಜ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪವರ್ ಅಭಿಯಾನಕ್ಕೆ ಸಾಥ್ ಕೊಟ್ಟಿರೋ ಅನ್ಸುಲ್ ಸಕ್ಸೇನಾ, ಮಧು ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ. #ಜಸ್ಟಿಸ್ ಫಾರ್ ಮಧು, ಪವರ್ ಟಿವಿ ಹ್ಯಾಷ್ ಟ್ಯಾಗ್ ಬಳಸಿ ಅನ್ಸುಲ್ ಪೋಸ್ಟ್ ಮಾಡಿದ್ದಾರೆ. ಪುಲ್ವಾಮಾ ದಾಳಿ ಸಂದರ್ಭ ಪಾಕ್ ವೆಬ್ಸೈಟ್ ಹ್ಯಾಕ್ ಮಾಡಿದ್ದ ಅನ್ಸುಲ್ ಸಕ್ಸೇನಾ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು.

ಏಪ್ರಿಲ್ 13ರಂದು ಕಾಣೆಯಾಗಿದ್ದ ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಏಪ್ರಿಲ್.15ರಂದು ಕಾಲೇಜಿನಿಂದ 4 ಕಿಲೋ ಮೀಟರ್ ದೂರದ ಅಜ್ಞಾತ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶವದ ಪಕ್ಕದಲ್ಲಿಯೇ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡಿದ್ದಾರೆ. ಡೆತ್​​ ನೋಟ್​​ ಇತ್ತಾದರೂ ಮಧು ಪತ್ತಾರ್ ಶವದ ಮೇಲಾದ ಗಾಯಗಳು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿತ್ತು. ಪೋಷಕರ ದೂರಿನನ್ವಯ ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಸುದರ್ಶನ್ ಯಾದವ್ ಎಂದ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ದೇಶದಲ್ಲಿ ಮತ್ತೊಂದು ನಿರ್ಭಯಾ ಹತ್ಯೆ ನಡೆದಿರೋ ಶಂಕೆ ಸಾವಿನ ಸುತ್ತ ಮೆತ್ತಿಕೊಂಡಿದೆ. ಮುಗ್ಧ ಯುವತಿಯ ಸಾವಿಗೆ ನ್ಯಾಯ ಕೊಡಿಸುವಲ್ಲಿ ನಿಮ್ಮ ಪವರ್ ಟಿವಿ ಸದಾ ಬದ್ಧವಾಗಿದೆ.

Exit mobile version