Site icon PowerTV

‘ನಮ್ಮ ಮೆಟ್ರೋ’ ಪಿಲ್ಲರ್​ನಲ್ಲಿ ಮತ್ತೆ ಬಿರುಕು

ಬೆಂಗಳೂರು: ‘ನಮ್ಮ ಮೆಟ್ರೋ’ ಪಿಲ್ಲರ್‌ಗಳಲ್ಲಿ ಮತ್ತೆ ಬಿರುಕು ಪತ್ತೆಯಾಗಿದೆ. ಸೌತ್‌ ಎಂಡ್‌ ಸರ್ಕಲ್‌ ಬಳಿಯ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್‌ ಸಂಖ್ಯೆ 66, 67ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಪಿಲ್ಲರ್ ನಂಬರ್ 67 ಸರಿಪಡಿಸಿದ್ದು, ಪಿಲ್ಲರ್‌ 66ರಲ್ಲೂ ಬೇರಿಂಗ್ ಬಿರುಕು ಬಿಟ್ಟಿದೆ. ಅಧಿಕಾರಿಗಳು ಒಂದು ಪಿಲ್ಲರ್​ ದುರಸ್ತಿಗೊಳಿಸಿ, ಇನ್ನೊಂದನ್ನು ಹಾಗೆಯೇ ಬಿಟ್ಟಿದ್ದಾರೆ. ಈ ಹಿಂದೆಯೂ ಟ್ರಿನಿಟಿ ಸರ್ಕಲ್ ಮೆಟ್ರೋ ಪಿಲ್ಲರ್​​ನಲ್ಲಿ ಬಿರುಕು ಕಾಣಿಸಿಕೊಂಡಿತ್ತು.

Exit mobile version