Site icon PowerTV

ಬಹಿರಂಗ ಸಭೆಯಲ್ಲಿ ಹಾರ್ದಿಕ್ ಪಟೇಲ್​ಗೆ ಕಪಾಳಮೋಕ್ಷ..!

ಅಹಮದಾಬಾದ್ : ಕಾಂಗ್ರೆಸ್​ನ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಕಾಂಗ್ರೆಸ್​​ ನಾಯಕ ಹಾರ್ದಿಕ್ ಪಟೇಲ್​ಗೆ ಕಾರ್ಯಕರ್ತನೊಬ್ಬ ಕಪಾಳಮೋಕ್ಷ ಮಾಡಿರೋ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ.
ಅಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹಾರ್ದಿಕ್ ಭಾಷಣ ಮಾಡುತ್ತಿರುವಾಗ ಕಾರ್ಯಕರ್ತನೊಬ್ಬ ವೇದಿಕೆಗೆ ಬರುತ್ತಾನೆ. ಆತನನ್ನು ಕಂಡ ಹಾರ್ದಿಕ್ ಆತ ತನಗೆ ಧನ್ಯವಾದ ಹೇಳಲು ಅಥವಾ ವಿಶ್ ಮಾಡಲು ಬರುತ್ತಿದ್ದಾನೆ ಅಂತ ಅನ್ಕೊಂಡಿದ್ದರು. ಆದರೆ, ಆತ ಹಾರ್ದಿಕ್ ಬಳಿ ಬಂದವನೇ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಹಾರ್ದಿಕ್​ಗೆ ಅವಮಾನದ ಜೊತೆಗೆ ಶಾಕ್​ ಕೂಡ ಆಗಿದೆ. ಅಲ್ಲಿ ನೆರೆದಿದ್ದವರು ಗಲಿಬಿಲಿಗೊಂಡಿದ್ದಾರೆ.

Exit mobile version