Site icon PowerTV

‘ಮಾತಾಡೋ ಮುನ್ನ ಹೋಂವರ್ಕ್ ಮಾಡ್ಕೊಂಡು ಬರ್ಲಿ’..!

ಶಿವಮೊಗ್ಗ: ಭಾಷಣ ಮಾಡುವುದಕ್ಕೂ ಮುನ್ನ ಹೋಂ ವರ್ಕ್ ಮಾಡಿಕೊಳ್ಳಲಿ ಎಂದು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಗೀತಾ ಶಿವರಾಜ್​ ಕುಮಾರ್​ಗೆ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, “ಬಂಗಾರಪ್ಪ ಅವರ ಹೆಸರು ಬಳಕೆ ಮಾಡಿಕೊಂಡರಷ್ಟೇ ಸಾಲದು.  ಸರಿಯಾಗಿ ಎಲ್ಲವೂ ಅರಿತಿರಬೇಕು. ಒಬ್ಬರ ಮೇಲೆ ಆರೋಪ ಮಾಡುವ ಮುನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜ್ಞಾನವಿರಬೇಕು. ಬಂಗಾರಪ್ಪ ಅವರ ಹೆಸರನ್ನು ಬಳಕೆ ಮಾಡಿಕೊಂಡು ಹೇಳಿಕೆ ನೀಡಬೇಡಿ” ಎಂದು ಸಲಹೆ ನೀಡಿದ್ದಾರೆ.

ಜಿಲ್ಲೆಯ ಸೊರಬದ ಆನವಟ್ಟಿ ಹಾಗೂ ಶಿಕಾರಿಪುರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ಅಂದರೆ ಸುಳ್ಳು ಎಂಬ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿ, “ಕೇವಲ ಬಾಯಲ್ಲಿ ರೈಲು ಬಿಡುವುದಲ್ಲ ಎಂದು ಮಧು ಬಂಗಾರಪ್ಪ ವಿರುದ್ಧವೂ ಟೀಕೆ ಮಾಡಿದ್ದಾರೆ. ಆ ಕೆಲಸ ಮಾಡಿದ್ದೆನೆ, ಈ ಕೆಲಸ ಮಾಡಿದ್ದೆನೆ ಎನ್ನುವ ಮಧು ಬಂಗಾರಪ್ಪ ಅವರು ಮಾಡಿರೋ ಕೆಲಸದ ಆಧಾರದ ಮೇಲೆ ಈ ಹಿಂದಿನ ಚುನಾವಣೆಯಲ್ಲಿ ಗೆಲ್ಲಬೇಕಿತ್ತು. ಹಾಲಪ್ಪ, ಯಡಿಯೂರಪ್ಪ ಮಾಡಿದ್ದ ಯೋಜನೆಗಳಿಗೆ ಅವರು ಶಾಸಕರಾಗಿದ್ದಾಗ, ಚಾಲನೆ ನೀಡುವಂತಹ ಕೆಲಸ ಮಾಡಿದ್ದಾರೆ ಅಷ್ಟೇ. ಅವರ ಸಾಧನೆ ಏನು ಇಲ್ಲ. ಯಾರೋ ಹುಟ್ಟಿಸಿದ ಮಗುವಿಗೆ ತನ್ನ ಹೆಸರು ಇಟ್ಟರೆ ಆಗುವುದಿಲ್ಲ.  ಕೇವಲ ಬಾಯಲ್ಲಿ ರೈಲು ಬಿಡದೇ, ಕೆಲಸ ಮಾಡಿ” ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಧು ಮಧು ಬಂಗಾರಪ್ಪ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version