Site icon PowerTV

ಮತಚಲಾಯಿಸಿ ಮಾದರಿಯಾದ ಸ್ಟಾರ್ಸ್..!

ಬೆಂಗಳೂರು : ಸಿನಿಮಾ ಮೂಲಕ ಜನಮನ ಗೆದ್ದು, ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ಸ್ಟಾರ್ ಪಟ್ಟ ಅಲಂಕರಿಸಿರುವ ನಟರು ಮತದಾನ ಮಾಡುವ ಮೂಲಕವೂ ಮಾದರಿಯಾಗಿದ್ದಾರೆ.
ಸ್ಯಾಂಡಲ್​ವುಡ್​ನ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್​ ಸ್ಟಾರ್ ಯಶ್, ಗೋಲ್ಡನ್​​ ಸ್ಟಾರ್​ ಗಣೇಶ್, ದುನಿಯಾ ವಿಜಯ್, ರಾಘವೇಂದ್ರ ರಾಜ್​ಕುಮಾರ್, ಅವಿನಾಶ್, ರಮೇಶ್ ಅರವಿಂದ, ರಕ್ಷಿತಾ ಪ್ರೇಮ್, ರಾಧಿಕಾ ಪಂಡಿತ್​, ನೆನಪಿರಲಿ ಪ್ರೇಮ್, ಪ್ರಿಯಾಂಕ ಉಪೇಂದ್ರ, ಹಿರಿಯ ನಟಿ ಲೀಲಾವತಿ ಮತ್ತವರ ಪುತ್ರ ವಿನೋದ್​ ರಾಜ್​ಕುಮಾರ್​, ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಅನೇಕರು ತಮ್ಮ ಫ್ಯಾಮಿಲಿ ಜೊತೆ ಮತಗಟ್ಟೆಗೆ ತೆರಳಿ ಸರತಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸಿ, ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ಸುದೀಪ್ ತನ್ನ ಪತ್ನಿ ಪ್ರಿಯಾ ಸುದೀಪ್ ಅವರಡೊನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜೆಪಿ ನಗರದಲ್ಲಿ , ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ಜೊತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆರ್​ಆರ್ ನಗರದಲ್ಲಿ ಮತಚಲಾಯಿಸಿದರು. ಅದೇ ರೀತಿ ಅವಿನಾಶ್ , ದುನಿಯಾ ವಿಜಯ್ ಕೂಡ ಆರ್​ಆರ್ ನಗರದಲ್ಲಿ ಮತ ಹಾಕಿದರು. ರಾಘವೇಂದ್ರ ರಾಜ್​ಕುಮಾರ್ ತನ್ನ ಕುಟುಂಬದವರೊಂದಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸದಾಶಿವನಗರದಲ್ಲಿ ಮತ ಚಲಾಯಿಸಿದರು. 

Exit mobile version