Site icon PowerTV

ಮಳೆಯ ನಡುವೆಯೂ ಬಿರುಸಿನ ಮತದಾನ

ಚಾಮರಾಜನಗರ: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಮಳೆಯ ನಡುವೆಯೂ ಬಿರುಸಿನ ಮತದಾನ ಮುಂದುವರಿದಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಇದೀಗ ಮಳೆ ಬಂದಿರುವುದರಿಂದ ಮತದಾನಕ್ಕೆ ಅಡ್ಡಿಯಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಮಳೆಯ ನಡುವೆಯೇ ಮತದಾರರು ಬಂದು ಮತ ಚಲಾಯಿಸಿದ್ದಾರೆ. ಬೊಮ್ಮಲಾಪುರ, ಕೊಡಸೋಗೆ, ಯಾನಗಳ್ಳಿ, ಬೊಮ್ಮನಹಳ್ಳಿ, ಅರಕಲವಾಡಿ ಪ್ರದೇಶದಲ್ಲಿಯೂ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ನಡುವೆಯೂ ಜನ ಮತ ಚಲಾಯಿಸುತ್ತಿದ್ದಾರೆ.

Exit mobile version