Site icon PowerTV

ಮತ ಹಾಕಿದ್ದನ್ನು ವಿಡಿಯೋ ಮಾಡಿ ಹರಿಬಿಟ್ಟ ತಾಪಂ ಸದಸ್ಯ..!

ತುಮಕೂರು : ಮತದಾನ ನಮ್ಮ ಹಕ್ಕು ನಿಜ, ಆದರೆ ನಾವು ಯಾರಿಗೆ ಮತಚಲಾಯಿಸಿದ್ದೇವೆ ಅಂತ ಬಹಿರಂಗ ಪಡಿಸಬಾರದು. ಅದರಲ್ಲೂ ಮತಹಾಕುವುದನ್ನು ಫೋಟೋ ತೆಗೆದು, ವಿಡಿಯೋ ಮಾಡಿ ಹಂಚಿಕೊಳ್ಳಲೇ ಬಾರದು. ಅದು ಅಪರಾಧವಾಗುತ್ತದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗುಜ್ಜನಡುನಲ್ಲಿ ತಾಲೂಕು ಪಂಚಾಯತ್ ಸದಸ್ಯ ಹನುಮಂತರಾಜು ತಾವು ವೋಟ್​ ಮಾಡೋದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಗುಜ್ಜನಡು ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ತಾಪಂ ಸದಸ್ಯ ಹನುಮಂತರಾಜು ತಾವು ಕಾಂಗ್ರೆಸ್​ಗೆ ಮತಹಾಕಿದ್ದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Exit mobile version