Site icon PowerTV

ದೇವೇಗೌಡ್ರಿಗೆ ಶಾಕ್​ ನೀಡಿದ ಕೆ.ಎನ್ ರಾಜಣ್ಣ..!

ತುಮಕೂರು : ಕಾಂಗ್ರೆಸ್​ನ ಮಾಜಿ ಶಾಸಕ ಕೆ.ಎನ್​ ರಾಜಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ‘ದೋಸ್ತಿ’ ನಾಯಕರಿಗೆ ಶಾಕ್ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಿ.ಎಸ್​​ ಬಸವರಾಜ್​​ ಅವರ ಜೊತೆ ಕೆ.ಎನ್ ರಾಜಣ್ಣ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್​​ನ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡರಿಗೆ ಟಿಕೆಟ್​ ನೀಡದೇ ದೋಸ್ತಿ ಧರ್ಮದ ಹೆಸರಲ್ಲಿ ದೇವೇಗೌಡರನ್ನು ಕಣಕ್ಕಿಳಿಸಿದ್ದಕ್ಕೆ ಸಿಟ್ಟಾಗಿದ್ದ ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ರು. ಆದರೆ, ಹೈಕಮಾಂಡ್ ಮನವಿ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದರು. ಆದರೆ,ದೇವೇಗೌಡರ ಪರ ಪ್ರಚಾರಕ್ಕೆ ಅಷ್ಟೊಂದು ಸಕ್ರಿಯವಾಗಿ ತೊಡಗಿಕೊಂಡಿರಲಿಲ್ಲ. ಇಂದು ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version