Site icon PowerTV

ವೋಟ್​ ಮಾಡಿದ್ರೆ ಉಚಿತ ಬೆಣ್ಣೆದೋಸೆ..!

ಬೆಂಗಳೂರು: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣಾ ಪ್ರಕ್ರಿಯೆ ಕೊನೆಗೊಂಡಿದೆ. ಮತಚಲಾಯಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವರು ತಮ್ಮದೇ ರೀತಿಯಲ್ಲಿ ಕೆಲಸಗಳನ್ನು ಮಾಡ್ತಿದ್ದಾರೆ. ಬೆಂಗಳೂರಿನ ನಿಸರ್ಗ ಗ್ರ್ಯಾಂಡ್​ ಹೋಟೆಲ್​ನಲ್ಲಿ ಮತದಾನ ಮಾಡಿದವರಿಗೆ ದಿನವಿಡೀ ಉಚಿತ ಬೆಣ್ಣೆ ದೋಸೆ ನೀಡಲಾಗಿದೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್​ನಲ್ಲಿ ಮತದಾನ ಮಾಡಿ ಶಾಯಿ ಗುರುತು ತೋರಿಸಿದ 6000 ಮಂದಿಗೆ ಉಚಿತ ಬೆಣ್ಣೆ ದೋಸೆ ಹಂಚಲಾಗಿದೆ. ಹಾಗೆಯೇ ಬೆಣ್ಣೆ ದೋಸೆ, ಖಾಲಿ ದೋಸೆ, ಸಿಹಿ ತಿಂಡಿ ಹಾಗೂ ತಂಪು ಪಾನೀಯ ವಿತರಿಸಲಾಗಿದೆ. ಹಾಗೆಯೇ ಉಚಿತ ಊಟವನ್ನೂ ಹಂಚಲಾಗಿದೆ. ಮತದಾನ ಮಾಡಿ ಬೆಳಗ್ಗೆಯಿಂದ ಸುಮಾರು 6000 ಜನ ಮತದಾನ ಮಾಡಿ ನಿಸರ್ಗ ಹೋಟೆಲ್ ಗೆ ಆಗಮಿಸಿದ್ದು, ಬೆಣ್ಣೆ ಖಾಲಿ ದೋಸೆ, ಸಿಹಿ ತಿಂಡಿ ಮತ್ತು ತಂಪು ಪಾನಕವನ್ನು ಹೊಟೇಲ್ ಮಾಲೀಕರು ಉಚಿತವಾಗಿ ನಿಡುತ್ತಿದ್ದಾರೆ. ಕಳೆದ ವರ್ಷದಿಂದಲೂ ನಿಸರ್ಗ ಹೋಟೆಲ್​ ಮಾಲೀಕರು ಮತದಾನದ ವೇಳೆ ಆಫರ್ ನೀಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಮತದಾನ ಮಾಡುವರನ್ನು ಪ್ರೋತ್ಸಾಹ ಮಾಡಬೇಕೆಂಬ ಉದ್ದೇಶದಿಂದ ಮಾಡುತ್ತಿರುವ ಕಾರ್ಯಕ್ರಮ ನಡೆಸುತ್ತಿದ್ದು, ಮತದಾನ ಗುರುತನ್ನು ತೋರಿಸಿ ಉಚಿತ ಊಟ ಪಡೆದು ಮತದಾರರು ಫುಲ್ ಖುಷ್ ಆಗಿದ್ದಾರೆ.

Exit mobile version