Site icon PowerTV

ಪಕ್ಷದಲ್ಲಿಯೇ ಸಿದ್ದರಾಮಯ್ಯ ಲೆಕ್ಕಕ್ಕಿಲ್ಲ: ಶ್ರೀರಾಮುಲು

ಬಾಗಲಕೋಟೆ: ಪಕ್ಷದಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಲೆಕ್ಕಕ್ಕಿಲ್ಲ ಅಂತ ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಎಲ್ಲೂ, ಏನೂ ನಡೀತಿಲ್ಲ. ನಾನು ದಕ್ಷಿಣ ಕರ್ನಾಟಕ ಪ್ರವಾಸ ಮಾಡಿ ಬಂದಿದ್ದೇನೆ. ಆದರೆ ಎಲ್ಲೂ ಪೋಸ್ಟರ್​ಗಳಲ್ಲಿ ಅವರ ಫೋಟೋ ಕಾಣಿಸ್ತಾ ಇಲ್ಲ. ಅವರ ಪಕ್ಷದಲ್ಲಿಯೇ ಅವರು ಲೆಕ್ಕಕ್ಕಿಲ್ಲದಂತಾಗಿದೆ. ಈ ಚುನಾವಣೆಯಲ್ಲಿ ಯಾರ ಆಟವೂ ನಡೆಯಲ್ಲ” ಎಂದು ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version