Site icon PowerTV

ಐಟಿ ದಾಳಿ: 81.21 ಲಕ್ಷ ರೂ. ನಗದು ವಶಕ್ಕೆ

ಶಿರಸಿ: ಶಿರಸಿಯಲ್ಲಿ ನಡೆದ ಐಟಿ ದಾಳಿಯಲ್ಲಿ 81.21 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಕೇಂದ್ರ ಸಚಿವ ಅನಂತ ಕುಮಾರ್ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಕೃಷ್ಣ ಎಸಳೆ, ಆರ್ ವಿ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ನಾಯ್ಕ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಐದು ಸಾವಿರದಂತೆ ಪ್ರತ್ಯೇಕ ಕವರ್​​ಗಳಲ್ಲಿ ಹಣವನ್ನು ಇಡಲಾಗಿತ್ತು. ಚುನಾವಣೆಗೆ ಹಂಚಲು ಇಟ್ಟ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉ.ಕ ಜಿಲ್ಲೆಯಲ್ಲಿ ಐಟಿ ರೇಡ್ ನಡೆದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಆಪ್ತರ ಮನೆ ಮೇಲೆ ನಿನ್ನೆ ರೇಡ್ ಆಗಿತ್ತು.

Exit mobile version