Site icon PowerTV

ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯದೇ ಇರುತ್ತಾ ? : ನಟ ಯಶ್

ಮಂಡ್ಯ : ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಮಂಡ್ಯ ರಣಕಣ ಮತ್ತೆ ಸುಮಲತಾ ಸುನಾಮಿಗೆ ಇಂದು ಸಾಕ್ಷಿಯಾಗಿತ್ತು. ಸ್ವಾಭಿಮಾನಿ ಸಮ್ಮಿಲನ ಅನ್ನೋ ಹೆಸರಲ್ಲಿ ಸುಮಲತಾ ನಡೆಸಿದ ಕ್ಲೈಮ್ಯಾಕ್ಸ್ ಸಮಾವೇಶಕ್ಕೆ ನಟರಾದ ದೊಡ್ಡಣ್ಣ, ದರ್ಶನ್, ಯಶ್ ಸಾಥ್ ನೀಡಿದ್ರು. ಈ ವೇಳೆ ಯಶ್ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲು ಆಗಲ್ಲ ಅಂತ ನೇರ ನೇರವಾಗಿ ಎಚ್ಚರಿಕೆ ನೀಡಿದ್ರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಯಾರ್ ಬೇಕಾದ್ರು ನಿಲ್ಲಬಹುದು. ನಿಮ್ ಊರ ಸೊಸೆ ನಿಂತಿದ್ದೇ ತಪ್ಪಾ? ಅವರು ಸ್ಪರ್ಧಿಸ್ತಾ ಇರೋದಕ್ಕೆ ಅದೇನು ದ್ವೇಷ, ಅದೆಂಥಾ ಮಾತುಗಳನ್ನಾಡ್ತಾ ಇದ್ದಾರೆ. ಪ್ರಚಾರದ ವೇಳೆಯಲ್ಲಿ ಸುಮಲತಾ ಅಕ್ಕ ಇರಬಹುದು, ದರ್ಶನ್ ಅವರಾಗಿರಬಹುದು, ಅಭಿ ಆಗಿರಬಹುದು, ಎಲ್ಲರೂ ತಾಳ್ಮೆಯಿಂದ ಎಲ್ಲವನ್ನೂ ನುಂಗಿ ಕೊಂಡಿದ್ದಾರೆ. ನಂಗೂ ತಾಳ್ಮೆಯಿಂದ ಇರಲು ಹೇಳ್ತಾ ಇದ್ರು. ಆದ್ರೆ, ನಮ್ ರಕ್ತ ಕೇಳಲ್ವೇ? ರಕ್ತ ಕುದಿಯದೇ ಇರುತ್ತಾ? ನಮ್ ಮನೆ ಹೆಣ್ಮಕ್ಕಳ ಮೇಲೆ ಮಾತಾಡಿದ್ರೆ, ಯಾರೇ ಆಗಿರಲಿ, ಎಂಥಾ ಸ್ಥಾನದಲ್ಲೇ ಇರಲಿ, ಅದೆಂಥಾ ಶಕ್ತಿಶಾಲಿಗಳೇ ಆಗಿರಲಿ ಸುಮ್ನೆ ಇರಲ್ಲ ಎಂದರು.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆಣೆ ಹಾಕಿ ನಟ ಯಶ್ ಹೇಳಿದ್ದೇನು?

Exit mobile version